ರೋಣ: ಯೋಧರು ಮತ್ತು ರೈತರ ಆದರ್ಶ ಮತ್ತು ತ್ಯಾಗಜೀವನವನ್ನು ಯುವಕರು ನೋಡಿ ಕಲಿಯಬೇಕಾಗಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ರವೀಂದ್ರನಾಥ ದಂಡಿನ ಹೇಳಿದರು.
ಪಟ್ಟಣದ ಕೆಎಸ್‌ಎಸ್ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದಿಂದ ಆಯೋಜಿಸಿದ್ದ ‘ನನ್ನ ದೇಶ ನನ್ನ ಮಣ್ಣು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿಯಲ್ಲಿ ವೈರಿಗಳ ಗುಂಡಿಗೆ ಎದೆಯೊಡ್ಡಿ ನಮ್ಮನ್ನು ರಕ್ಷಿಸುವ ಯೋಧರು ಮತ್ತು ಮಳೆಬಿಸಿಲು ಲೆಕ್ಕಿಸದೆ ಅನ್ನ ನೀಡುವ ರೈತರು ನಿಜವಾದ ಆದರ್ಶ ವ್ಯಕ್ತಿಗಳಾಗಿದ್ದಾರೆ. ಸಿನಿಮಾ ತಾರೆಯರ ಬಗ್ಗೆ ಅಭಿಮಾನ ಹೊಂದುವುದಕ್ಕಿಂತ ಇವರ ಬಗ್ಗೆ ಅಭಿಮಾನ ಹೊಂದಬೇಕು ಎಂದರು. ಪ್ರಾಚಾರ್ಯ ಸಿ.ಬಿ. ಪೋಲಿಸ್‌ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕೆಎಸ್‌ಎಸ್ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಎಸ್.ಆರ್. ನದಾಫ, ಕನಕದಾಸ ಶಿಕ್ಷಣ ಸಂಸ್ಥೆಯ ಸ್ಥಾನಿಕ ಮುಖ್ಯಸ್ಥ ಐ.ಬಿ. ದಂಡಿನ, ಪದವಿಪೂರ್ವ ವಿಭಾಗದ ಪ್ರಾಚಾರ್ಯರಾದ ಎ.ಎಚ್. ನಾಯ್ಕರ, ಉಪನ್ಯಾಸಕರಾದ ಎಂ.ಎಸ್. ದಳವಾಯಿ, ಯು.ಬಿ. ಬಸನಗೌಡ್ರ. ಎಂ. ಎಚ್. ನಾಯ್ಕರ ಎಸ್.ವಿ. ಸಂಕನಗೌಡ್ರ, ಇತರರಿದ್ದರು.