ಜಿಲ್ಲೆ

ಕಸಾಪ ತಾಲೂಕಾಧ್ಯಕ್ಷರಾಗಿ ಸೋಲಾರಗೊಪ್ಪ ನೇಮಕ

ಕಲಘಟಗಿ: ಧಾರವಾಡ ಜಿಲ್ಲಾ ಕಾರ್ಯಕಾರಿ ಸಮಿತಿಗೆ ಕಲಘಟಗಿ, ಹುಬ್ಬಳ್ಳಿ ನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ನಾಮನಿರ್ದೇಶನ ಮಾಡಿ ಅನುಮೋದಿಸಲಾಗಿದೆ. ಕಲಘಟಗಿ ತಾಲೂಕು ಕಸಾಪ ಘಟಕದ ಅಧ್ಯಕ್ಷರಾಗಿ ವಕೀಲ, ಪತ್ರಕರ್ತ ರಮೇಶ ಸೋಲಾರಗೊಪ್ಪ ಅವರನ್ನು ಶನಿವಾರ ನೇಮಕ ಮಾಡಲಾಗಿದೆ.
ಈ ಹಿಂದಿನ ಅಧ್ಯಕ್ಷರಾಗಿದ್ದ ಈಶ್ವರ ಜವಳಿ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ರಮೇಶ ಅವರನ್ನು ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.