ತುಮಕೂರು: ನವೀಕರಿಸಬಹುದಾದ ಇಂಧನ ಮೂಲಗಳೇ ಭವಿಷ್ಯದ ಭರವಸೆ. ಈ ನಿಟ್ಟಿನಲ್ಲಿ ವಿದ್ಯುತ್ ಸ್ವಾವಲಂಬನೆ ಸಾಧಿಸಲು ಸಿದ್ಧಗಂಗಾ ವೈದ್ಯಕಿಯ ಮಹಾವಿದ್ಯಾಲಯ ಸೌರ ವಿದ್ಯುತ್ ಉತ್ಪಾದಿಸಿ ಪರಿಸರ ಕಾಳಜಿಯ ಬದ್ಧತೆ ನಿರೂಪಿಸಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ಹೇಳಿದರು.
ವಿಜಯಪುರ ಜಿಲ್ಲೆಯ ಝಳಕಿ ಬಳಿ ಇತ್ತೀಚೆಗೆ ನಿಯೋಗ್ರಿನ್ ಸಂಸ್ಥೆ ಜತೆ ಜಂಟಿಯಾಗಿ ನಿರ್ಮಿಸಿರುವ 2 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನಾ ಟಕಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ವಿದ್ಯುತ್ ಉತ್ಪಾದನೆಗಾಗಿ ಅತಿವಿರಳವಾಗಿ ಸಿಗುವ ಕಲ್ಲಿದ್ದಲು ಮುಂತಾದ ನೈಸರ್ಗಿಕ ಸಂಪನ್ಮೂಲಗಳನ್ನು ಹೆಚ್ಚಾಗಿ ಬಸಲಾಗುತ್ತಿದೆ. ಇದು ಪರಿಸರಕ್ಕೆ ಎಂದಿಗೂ ಮಾರಕವಾಗುವಂತಹದ್ದು, ಬೃಹತ್ ಆರೋಗ್ಯ ಸೇವೆಯ ನಿರ್ವಹಿಸಲು ಪ್ರತಿ ತಿಂಗಳು ಲಾಂತರ ರೂಪಾಯಿ ಮೌಲ್ಯದ ವಿದ್ಯುತ್ ಬಳಕೆ ಅನಿವಾರ್ಯವಾಗಿತ್ತು. ಇದೀಗ ಸೌರ ಶಕ್ತಿ ಬಳಕೆಯಿಂದ ಪರಿಸರಕ್ಕೆ ಹೆಚ್ಚಿನ ಕೊಡುಗೆ ನೀಡಲಾಗುತ್ತಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆ ಆರಂಭದ ದಿನಗಳಲ್ಲೇ ಹೊಸದುರ್ಗ ಬಳಿಯ ಮುತ್ತೋಡು ಎಂಬಲ್ಲಿ 1 ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನ ಟಕ ಸ್ಥಾಪಿಸಲಾಗಿತ್ತು. ಇದೀಗ ಎರಡನೇ ಘಟಕದಿಂದ ಒಟ್ಟು ವಿದ್ಯುತ್ ವೆಚ್ಚದಲ್ಲಿ ಶೇ.90ರಷ್ಟು ತಗ್ಗಿಸಲಾಗಿದೆ ಎಂದು ಸಿದ್ದಗಂಗಾ ವೈದ್ಯಕಿ ಮಹಾವಿದ್ಯಾಲಯದ ಕಾರ್ಯದರ್ಶಿ ಟಿ.ಎಂ.ಸ್ವಾಮಿ ಹೇಳಿದರು.
ಪೂಜ್ಯರ ದೂರದೃಷ್ಟಿ ಲದಿಂದ ಸೌರ ವಿದ್ಯುತ್ ಉತ್ಪಾದನಾ ಟಕ ನಿರ್ಮಿಸಲಾಗಿದೆ. ವಿದ್ಯುತ್ ವೆಚ್ಚ ತಗ್ಗುವುದರಿಂದ ಉಚಿತ ಸೇವೆಯತಹ ಕಾರ್ಯಕ್ರಮಗಳು ಅಬಾಧಿತವಾಗಿ ಸಾಗಲಿದೆ ಎಂದು ಸಿದ್ದಗಂಗಾ ವೈದ್ಯಕಿಯ ಮಹಾವಿದ್ಯಾಲಯದ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ನಿಯೋಗ್ರೀನ್ ಸಿಇಒ ಕೃಷ್ಣ ಕುಲಕರ್ಣಿ, ವೈದ್ಯಕಿಯ ಅಧೀಕ್ಷಕ ಡಾ.ನಿರಂಜನ್, ಸಿಇಒ ಡಾ.ಸಂಜೀವಕುಮಾರ್, ಲಕ್ಷಿ$್ಮನಾರಾಯಣ, ಅಮರ್ ಮತ್ತಿತರರು ಉಪಸ್ಥಿತರಿದ್ದರು.