ಬೆಳಗಾವಿ: ಕೃಷಿ ಕ್ಷೇತ್ರದಲ್ಲಿ ಸೌರ ಆಧಾರಿತ ಸಂಸ್ಕರಣಾ ಉಪಕರಣಗಳ ಅಗತ್ಯವಿದೆ. ಇವು ರೈತರ ಕೃಷಿ ಉತ್ಪನ್ನಗಳ ಸಂಸ್ಕರಣೆ ಉತ್ತೇಜಿಸುತ್ತವೆ ಮತ್ತು ಕೃಷಿ ಕುಟುಂಬಗಳ ಆರ್ಥಿಕ ಸ್ಥಿರತೆ ಹೆಚ್ಚಿಸುತ್ತವೆ ಎಂದು ಮತ್ತಿಕೊಪ್ಪದ ಐಸಿಎಆರ್& ಕೆಎಲ್ಇ ಕಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಎಸ್.ಎಂ. ವಾರದ ಹೇಳಿದರು.
ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್& ಕೆಎಲ್ಇ ಕಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬೆಂಗಳೂರಿನ ಸೆಲ್ಕೋ ೌಂಡೇಷನ್ ಮತ್ತು ಸಿದ್ಧಗಿರಿ ಸಾವಯವ ಕಷಿಕರ ಬಳಗದ ಸಹಯೋಗದೊಂದಿಗೆ ಈಚೆಗೆ ಹಮ್ಮಿಕೊಂಡದ್ದ ಡಿಆರ್ಇ ಆಧಾರಿತ (ವಿಕೇಂದ್ರೀಕತ ನವೀಕರಿಸಬಹುದಾದ ಇಂಧನ) ಆನ್&ಾಮ್ರ್ ಸಂಸ್ಕರಣಾ ತಂತ್ರಜ್ಞಾನಗಳ ಕುರಿತು ಜಾಗತಿ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಸ್ಯ ಸಂರಣೆ ವಿಜ್ಞಾನಿ ಡಾ. ಎಸ್.ಎಸ್. ಹಿರೇಮಠ ಮಾತನಾಡಿ, ಸಸ್ಯ ಸಂರಣೆ ಚಟುವಟಿಕೆಯಲ್ಲೂ ಸೌರ ಆಧಾರಿತ ಉಪಕರಣ ಬಳಸಿಕೊಳ್ಳಲು ಸಲಹೆ ನೀಡಿದರು. ಸೆಲ್ಕೋ ೌಂಡೇಷನ್ ತಂಡದ ಮಾಯಪ್ಪ ಮತ್ತು ನವ್ಯಾ, ಭೀಮಸೇನ ಜಿರಲಿ, ರವಿ ಕುರುಬೆಟ, ಈರನಗೌಡ ಪಾಟೀಲ ಇತರರಿದ್ದರು.