ಜಿಲ್ಲೆ

ಸೌರಶಕ್ತಿ ಪಂಪ್‌ಸೆಟ್ ಬಳಕೆಗೆ ನಿರಾಸಕ್ತಿ

ಸುನಿಲ್ ಪೊನ್ನೇಟಿ

ಮಡಿಕೇರಿ:

ವಿದ್ಯುತ್ ಉತ್ಪಾದನೆಯಲ್ಲಿ ರೈತರೂ ಸ್ವಾವಲಂವಬಿಗಳಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಕನಸು. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರವೂ ಸೌರಶಕ್ತಿ ಬಳಕೆ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ರೈತರು ಸೋಲಾರ್ ಪಂಪ್‌ಸೆಟ್ ಅಳವಡಿಕೆ ಮಾಡಿಕೊಳ್ಳಲು 'ಕುಸುಮ್ ಬಿ' ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ರೈತರು ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಕೆ ಮಾಡಿಕೊಳ್ಳಬಹುದು. ಇದರಿಂದಾಗಿ ಸಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎನ್ನುವುದು ಸರ್ಕಾರದ ನಿರೀಕ್ಷೆ.

ರಾಜ್ಯದ ಇತರ ಭಾಗಗಳಲ್ಲಿ ರೈತರಿಗೆ ಇರುವಂತೆ ನಮಗೂ ಯಾವುದೇ ಷರತ್ತುಗಳಿಲ್ಲದೆ ಉಚಿತ ವಿದ್ಯುತ್ ಕೊಡಬೇಕು ಎನ್ನುವುದು ಕೊಡಗಿನ ಕಾಫಿ ಬೆಳೆಗಾರರ ಬಹುಕಾಲದ ಬೇಡಿಕೆ. ಇದಕ್ಕೆ ಸರ್ಕಾರ ಅಸ್ತು ಎಂದಿದ್ದರೂ ಷರತ್ತುಗಳ ಕಾರಣಕ್ಕೆ ಈ ಸವಲತ್ತು ಇನ್ನೂ ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯ ಕಾಫಿ ಬೆಳೆಗಾರರಿಗೆ ಲಭ್ಯವಾಗಿಲ್ಲ. ಈ ಮಧ್ಯೆ ಸರ್ಕಾರ ಕೃಷಿ ಪಂಪ್ ಸೆಟ್‌ಗೆ ಬಳಕೆ ಮಾಡಲಾಗುತ್ತಿರುವ ವಿದ್ಯುತ್‌ಗೆ ಸಂಬAಧಿಸಿದAತೆ ಮತ್ತಷ್ಟು ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಇಂತ ಸಂದರ್ಭದಲ್ಲಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಬಳಕೆ ಅತ್ಯಂತ ಪರಿಣಾಮಕಾರಿ ಮಾರ್ಗ ಎಂದು ವಿಶ್ಲೇಷಿಸಲಾಗುತ್ತಿದೆ.

ಕೊಡಗಿನಂತ ಮಲೆನಾಡು ಪ್ರದೇಶದಲ್ಲಿ ಸೌರ ವಿದ್ಯುತ್ ಬಳಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎನ್ನುವ ಚರ್ಚೆಗಳು ನಡೆದಿರುವ ಮಧ್ಯೆಯೇ ಹಲವು ಕಡೆಗಳಲ್ಲಿ ಪಂಪ್‌ಸೆಟ್‌ಗೆ ಸೋಲಾರ್ ವಿದ್ಯುತ್ ಸ್ಥಾವರ ಅಳವಡಿಸಿಕೊಂಡು ಯಶಸ್ವಿಯಾದವರೂ ಇದ್ದಾರೆ. ಜಿಲ್ಲೆಯ ಬೆಟ್ಟ ಪ್ರದೇಶಗಳು, ದಟ್ಟ ಕಾಡು ಹೊರತುಪಡಿಸಿ ಕುಶಾಲನಗರ, ಸೋಮವಾರಪೇಟೆ, ಪೊನ್ನಂಪೇಟೆ ತಾಲೂಕುಗಳ ಬಹುತೇಕ ಭಾಗಗಳಲ್ಲಿ ಸೋಲಾರ್ ಪಂಪ್‌ಸೆಟ್ ಅಳವಡಿಕೆಗೆ ಅವಕಾಶಗಳು ಇವೆ ಎನ್ನುವುದು ಈಗಾಗಲೇ ಸಾಬೀತಾಗಿದೆ. ಮರದ ರೆಂಬೆ ಬೀಳುವುದು, ಕಾಡುಪ್ರಾಣಿಗಳ ಉಪಟಳ ಮತ್ತಿತರ ನಕರಾತ್ಮಕ ಅಂಶಗಳೂ ಇದ್ದರೂ ಉಪಯೋಗವಂತೂ ಹೆಚ್ಚೇ ಇದೆ.

ಪಂಪ್‌ಸೆಟ್‌ಗೆ ಸೌರ ವಿದ್ಯುತ್ ಬಳಕೆ ಮತ್ತು ಈ ಸಂಬAಧ ಸರ್ಕಾರದ ಯೋಜನೆಗಳ ಬಗ್ಗೆ ಇನ್ನು ಕೂಡ ಬಹಳಷ್ಟು ರೈತರಿಗೆ ಮಾಹಿತಿ ಇಲ್ಲ. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದರೆ ಸರ್ಕಾರದ ಉದ್ದೇಶ ಸಾರ್ಥಕ ಆಗಬಹುದು. ಈ ಎಲ್ಲಾ ಒಟ್ಟಾರೆ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಕೃಷಿಗೆ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿ ಸರ್ಕಾರ ವಂಚಿಸಿದೆ. ಇದಲ್ಲದೆ ವಿದ್ಯುತ್ ಸಂಪರ್ಕವನ್ನು ದುಬಾರಿಯನ್ನಾಗಿ ಮಾಡಿದೆ. ಕಾಫಿ ಕೃಷಿಕರಿಗೆ ಬೇಸಿಗೆಯಲ್ಲಿ ಮಾತ್ರ ವಿದ್ಯುತ್ ಅಗತ್ಯವಿರುತ್ತದೆ. ಹಾಗಾಗಿ ಸೋಲಾರ್ ಬಳಕೆ ಉಪಯುಕ್ತವಾಗಿದೆ. ಕೃಷಿಗೆ ಸೋಲಾರ್ ಅಳವಡಿಕೆ ಮಾಡಿಕೊಂಡರೆ ಮನೆಯ

ಉಪಯೋಗಕ್ಕೂ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಬೇಕು.

ಸುಮೇಶ್, ಪ್ರಗತಿಪರ ಕೃಷಿಕ, ನಂಜರಾಯಪಟ್ಟಣ

ಉತ್ತರ ಕೊಡಗಿನ ಬಹುತೇಕ ಕಡೆಗಳಲ್ಲಿ ಮನೆಗಳಿಗಾಗಿ ಸೌರ ವಿದ್ಯುತ್ ಬಳಕೆ ಈಗಾಗಲೇ ಯಶಸ್ವಿಯಾಗಿದೆ. ಇದನ್ನು ಕೃಷಿಗೆ ಬಳಸುವುದರಿಂದ ಆಗುವ ಅನುಕೂಲತೆಗಳ ಬಗ್ಗೆ ಸಂಬAಧಿಸಿ ಇಲಾಖೆ ಅಧಿಕಾರಿಗಳು ಕೃಷಿಕರಿಗೆ ತಿಳುವಳಿಕೆ ಕೊಡಬೇಕು. ಸೌರ ವಿದ್ಯುತ್ ಬಳಕೆಯ ಪ್ರಮಾಣ ಹೆಚ್ಚಾದರೆ ರೈತರು ವಿದ್ಯುತ್ ಸ್ವಾಬಲಂಬಿಗಳಾಗುತ್ತಾರೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ಹಣವೂ ಉಳಿಸಬಹುದು.

ಗೀತಾ ಧರ್ಮಪ್ಪ, ಪ್ರಗತಿಪರ ಕೃಷಿಕರು, ಕುಶಾಲನಗರ

ಕೊಡಗು ಗುಡ್ಡಗಾಡು ಪ್ರದೇಶ. ದೊಡ್ಡ ದೊಡ್ಡ ಮರಗಳಿಂದ ಗ್ರಾಮಗಳು ಆವೃತ್ತವಾಗಿವೆ. ಇಂಥ ಪರಿಸ್ಥಿತಿಯಲ್ಲಿ ಸೌರ ಬೆಳಕಿನಿಂದ ವಿದ್ಯುತ್ ಉತ್ಪಾದನೆ ಕಷ್ಟ ಸಾಧ್ಯ. ವಿದ್ಯುತ್ ಪಂಪ್‌ಸೆಟ್ ಅತ್ಯಾವಶ್ಯಕ. ಸದ್ಯದ ಸ್ಥಿತಿಯಲ್ಲಿ ವಿದ್ಯುತ್ ದರ ಹೆಚ್ಚಳದಿಂದ ಸಣ್ಣ ಕಾಫಿ ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಅಕಾಲಿಕ ಮಳೆಯಿಂದ ಕಾಫಿ, ಕಾಳುಮೆಣಸು ಫಸಲು ಹಾನಿಯಾಗುತ್ತಿದೆ. ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಡಲೇಬೇಕು.

ಬಿ.ಪಿ. ಮೊಗಪ್ಪ, ಅಧ್ಯಕ್ಷ, ರೈತ ಸಂಘ, ಗೌಡಳ್ಳಿ ವಲಯ

ಸೌರ ವಿದ್ಯುತ್ ಯೋಜನೆ ಒಳ್ಳೆಯದು. ಆದರೆ ಕೊಡಗಿನಲ್ಲಿ ಅದು ಅಷ್ಟೊಂದು ಪ್ರಯೋಜನವಾಗುತ್ತಿಲ್ಲ. ಬೆಟ್ಟ ಗುಡ್ಡ ಹಾಗೂ ಹೆಚ್ಚು ಬಿಸಿಲು ಕೊಡಗಿನ ಮನೆಗಳಿಗೆ ಬಿಳುತ್ತಿಲ್ಲ. ಸೌರ ಯೋಜನೆಗೆ ಬಿಸಿಲು ಅತ್ಯಾವಶ್ಯಕವಾಗಿ ಬೇಕು. ಇತ್ತೀಚಿಗೆ ಮನೆಗಳಿಗೆ ಅಳವಡಿಸಿರುವ ಸೌರ ಯೋಜನೆ ಕೇವಲ ಒಂದು ಬಲ್ಬ್ ಉರಿಯಲು ಮಾತ್ರ ಸಾಧ್ಯವಾಗುತಿದ್ದೆ. ಪಂಪ್ ಸೆಟ್ ಚಾಲನೆ ಮಾಡಲು ಸಾಕಾಗುವುದಿಲ್ಲ. ಹಾಗಾಗಿ ಪಂಪ್‌ಸೆಟ್ ಉಚಿತ ವಿದ್ಯತ್ ಕೊಡಬೇಕು.

ಯೋಗೇಶ್, ಸ್ವ-ಉದ್ಯೋಗಿ, ಗುಡುಗಳಲೆ, ಶನಿವಾರಸಂತೆ

ಕೊಡಗಿನಲ್ಲಿ ವರ್ಷದ ಪ್ರತಿ ತಿಂಗಳು ಮೋಡ ಕವಿದ ವಾತಾವರಣ ಇರುವುದರಿಂದ ಸೌರ ವಿದ್ಯುತ್ ಯೋಜನೆ ಪ್ರಯೋಜನಕ್ಕೆ ಬರುತ್ತಿಲ್ಲ, ಅನೇಕರು ತಮ್ಮ ಮನೆಗಳಿಗೆ ಅಳವಡಿಸಿರುವುದರಿಂದ ಅದರಿಂದ ಅಷ್ಟೊಂದು ಉಪಯೋಗ ಆಗುತ್ತಿಲ್ಲ. ಹಾಗಾಗಿ ಪಂಪ್‌ಸೆಟ್‌ಗಳಿಗೆ ಈ ಯೋಜನೆ ಅಳವಡಿಸಿಕೊಂಡರೆ ಅನುಕೂಲ ಆಗುವುದಿಲ್ಲ ಎಂದು ರೈತರು ಹಿಂದೇಟು ಹಾಕುತ್ತಿದ್ದಾರೆ.

ಪ್ರೀತಿ ದೇವರಾಜ್, ಸ್ವ-ಉದ್ಯೋಗಿ, ಶನಿವಾರಸಂತೆ

ಭೌಗೋಳಿಕವಾಗಿ ಕೊಡಗು ಬೆಟ್ಟ ಗುಡ್ಡಗಳಿಂದ ಕೂಡಿದೆ ಮತ್ತು ಪ್ರಾಕೃತಿಕವಾಗಿ ಸುತ್ತಲೂ ಗಿಡ ಮರಗಳು ಆವೃತವಾಗಿರುವುದರಿಂದ ಸಮರ್ಪಕವಾದ ಯೋಜನೆಯನ್ನು ಮಾಡಿ ಅದರಂತೆ ನಿರ್ವಹಣೆ ಮಾಡಿದರೆ ಸೌರ ವಿದ್ಯುತ್ ಬಳಕೆ ಯಶಸ್ವಿಯಾಗಲಿದೆ. ಕಾಡುಪ್ರಾಣಿಗಳಿಂದ, ಗಿಡ-ಮರದ ಕೊಂಬೆಗಳಿAದ ಸೋಲಾರ್ ಪ್ಯಾನಲ್‌ಗೆ ಯಾವುದೇ ತೊಂದರೆ ಆಗದಂತೆ ಎಚ್ಚರ ವಹಿಸಿದರೆ ಈ ಕಾರ್ಯ ಯಶಸ್ವಿಯಾಗುತ್ತದೆ. ಕೆಲವು ರೈತರು ಇದರಲ್ಲಿ ಯಶಸ್ವಿಯಾಗಿದ್ದು ಸಮರ್ಪಕ ಮಾರ್ಗದರ್ಶನದ ಮೂಲಕ ಮಾಡಿದರೆ ಒಳಿತು.

ನಟರಾಜ್ ಬಿ.ಜೆ., ಅಧ್ಯಕ್ಷ, ಬಾಲವಳೀಕಾರ್ ಸಂಘ, ವಿರಾಜಪೇಟೆ

ಇತ್ತೀಚಿಗೆ ವಿದ್ಯುತ್ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಹಾಗಾಗಿ ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವ ಸೌರ ವಿದ್ಯುತ್ ಅಳವಡಿಕೆಗೆ ಸರ್ಕಾರ

ಇನ್ನೂ ಹೆಚ್ಚಿನ ಸಬ್ಸಿಡಿ ಪ್ರೋತ್ಸಾಹ ಕೊಡಬೇಕು. ಆಗ ಮಾತ್ರ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆ ಕಡಿಮೆ ಮಾಡಿ, ಸೌರಶಕ್ತಿಯ ಬಳಕೆ ಮೂಲಕ ರೈತರು ಸ್ವಾವಲಂಬನೆ ಬದುಕು ಸಾಧಿಸಬಹುದು.

ಇಂದಿರಾ, ಮಾಜಿ ಸದಸ್ಯೆ, ಗ್ರಾಮ ಪಂಚಾಯಿತಿ, ಮಾಲ್ದಾರೆ

ಕಾಫಿಗೆ 10 ಹೆಚ್‌ಪಿ ತನಕ ಉಚಿತ ವಿದ್ಯುತ್ ಕೊಡುವ ಸರ್ಕಾರದ ಭರವಸೆ ಇನ್ನೂ ಈಡೇರಿಲ್ಲ. ಸರಿಯಾದ ಸಮಯಕ್ಕೆ ವಿದ್ಯುತ್ ಕೂಡ ಇರುವುದಿಲ್ಲ. ಈ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಸೌರ ವಿದ್ಯುತ್ ಬಳಕೆಗೆ ಪ್ರೋತ್ಸಾಹ ಕೊಡುತ್ತಿದೆ. ಆದರೆ ಈ ಬಗ್ಗೆ ರೈತರಿಗೆ ಮಾಹಿತಿ ಕೊರತೆ ಇದೆ. ಹಾಗಾಗಿ ಸೌರ ವಿದ್ಯುತ್ ಬಳಕೆಯಿಂದ ಆಗುವ ಲಾಭದ ಬಗ್ಗೆ ಇನ್ನಷ್ಟು ಪ್ರಚಾರ ಮಾಡಬೇಕು.

ಬೆಳ್ಯನ ಚಂದ್ರಪ್ರಕಾಶ್(ರವಿ), ಅವಂದೂರು ಗ್ರಾಮ

ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಅಸಮರ್ಪಕ ಪೂರೈಕೆಯಿಂದ ಕೊಡಗಿನ ರೈತರು ಬೆಳೆದ ಬೆಳೆಗಳಿಗೆ ನೀರು ಪೂರೈಸಲು ಆಗುತ್ತಿಲ್ಲ. ಸರ್ಕಾರದ ನೀತಿಗಳಿಂದಾಗಿ ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಕೂಡ ದುಬಾರಿಯಾಗಿದೆ. ಹಾಗಾಗಿ ನಾನು ನಮ್ಮ ಕಾಫಿ ತೋಟದಲ್ಲೇ ಖಾಸಗಿ ಕಂಪನಿ ಸೋಲಾರ್ ಪ್ಯಾನೆಲ್‌ನೊಂದಿಗೆ ಕೊಳವೆ ಬಾವಿಗೆ ಮೋಟರ್ ಆಳವಡಿಸಿ ಕೃಷಿ ಬೆಳೆಗಳಿಗೆ ದಿನನಿತ್ಯ ನೀರು ಹಾಯಿಸುವ ಮೂಲಕ ಯಶಸ್ವಿಯಾಗಿದ್ದೇನೆ.

ಸೂದನ ಸತೀಶ್, ಬೆಳೆಗಾರ, ಗುಡ್ಲೂರು

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವ್ಯಾಪ್ತಿಯಲ್ಲಿನ ಕೊಡಗು ಜಿಲ್ಲೆಯಲ್ಲಿ ಸುಮಾರು 5150 ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಸೋಲಾರ್ ಮೂಲಕ ಪಂಪ್‌ಸೆಟ್ ಸಂಪರ್ಕದ ಯೋಜನೆಗಳಿಗೆ 160 ರಷ್ಟು ಅರ್ಜಿಗಳು ನೋಂದಣಿ ಆಗಿದೆ. ಕೊಡಗು ಜಿಲ್ಲೆಯ ರೈತರಿಗೆ ಸೋಲಾರ್ ಚಾಲಿತ ಪಂಪ್‌ಸೆಟ್ ಸಂಪರ್ಕದ ಯೋಜನೆಯ ನಿರ್ವಹಭೆ ತೊಂದರೆ ಕುರಿತಾಗಿ ಯಾವುದೇ ದೂರು ಬಂದಿಲ್ಲ.

ಕೆ.ಜೆ. ಜಾರ್ಜ್, ಇಂಧನ ಸಚಿವ