ಜಿಲ್ಲೆ

ಸೋಲಾಪುರ ಗ್ರಾಮದ ಅಭಿವೃದ್ಧಿಗೆ ಕ್ರಮ

ಪ್ರಶಾಂತ ಹೂಗಾರ

ಬೆಳಗಾವಿ: ಐದು ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಶಾಲೆಗಳ ದುರಸ್ತಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸೋಲಾಪುರ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹಾಗೂ ಮರಾಠಿ ಶಾಲೆಯ ಮೂರು ಕೊಠಡಿಗಳ ದುರಸ್ತಿ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿದರು. ಸೋಲಾಪುರದಿಂದ ಹೊಸೂರು ಚಂಪಾ ವರೆಗೆ ರಸ್ತೆ ನಿರ್ಮಾಣಕ್ಕೆ 90 ಲಕ್ಷ ರೂ. ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದರು.

ಬಿಇಒ ಪ್ರತಿಭಾ ಪಾಟೀಲ, ಕೆಇಬಿ ನಿರ್ದೇಶಕರಾದ ಮಹಾದೇವ ಕ್ಷೀರಸಾಗರ, ಸಂಕೇಶ್ವರ ಪುರಸಭೆ ಸದಸ್ಯ ಸುನೀಲ ಪರ್ವತರಾವ, ಗ್ರಾಪಂ ಅಧ್ಯಕ್ಷ ಅಶೋಕ, ಮುಖಂಡರಾದ ರೋಹನ ನೇಸ್ರಿ, ಕುಮಾರ ಸೆಂಡೆ, ರಾವಸಾಹೇಬ ಕುಲಕರ್ಣಿ, ಅನಿಲ ಖಾನಾಯಿ, ತೋಡಕರ, ಮಹೇಶ ಜಾದವ, ಎಸ್‌ಡಿಎಂಸಿ ಅಧ್ಯಕ್ಷ ಅನಿಲ ಭೂಸನ್ನವರ ಇತರರಿದ್ದರು.