ಗುಂಡ್ಲುಪೇಟೆ : ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಚಾಮರಾಜನಗರ ಕೃಷಿ ಮಹಾ ವಿದ್ಯಾಲಯಗಳ ವತಿಯಿಂದ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದಲ್ಲಿ ಮಂಗಳವಾರ ಸಂಜೆ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಅಂಗವಾಗಿ ಅಜೋಲ್ಲಾ ಹಾಗು ಮಣ್ಣು ಮಾದರಿಯ
ಪ್ರಾತ್ಯಕ್ಷಿಕೆ ನಡೆಸಲಾಯಿತು. ಕೃಷಿ ಕಾಲೇಜಿನ ಮಣ್ಣು ವಿಜ್ಞಾನಿ ಡಾ.ಪ್ರದೀಪ್ ಮಾತನಾಡಿ, ಮಣ್ಣು ಪರೀಕ್ಷೆಯಿಂದ ಅನೇಕ ಲಾಭಗಳಿವೆ ಎಂದರು.
ಗದ್ದೆ, ತೋಟಗಳಲ್ಲಿ ಮಣ್ಣು ಮಾದರಿ ತೆಗೆಯಲು ಸೂಕ್ತವಾದ ಸಮಯ ಹಾಗೂ ಸ್ಥಳಗಳ ಬಗ್ಗೆ ಮಾಹಿತಿ ನೀಡಿದರು.
ಇದೇ ಸಂದರ್ಭ ಅಜೋಲ್ಲಾ ಬೆಳೆ ಉಪಯೋಗಗಳನ್ನು ರೈತರಿಗೆ ಅವರು ತಿಳಿಸಿದರು. ಗ್ರಾಮದ ರೈತರು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇದ್ದರು.