ಹುಬ್ಬಳ್ಳಿ: ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಶನಿವಾರ ಮಣ್ಣು ಆರೋಗ್ಯದ ಕುರಿತು ರೈತರಿಗೆ ತರಬೇತಿ ಏರ್ಪಡಿಸಲಾಗಿತ್ತು.
ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಶಿವಲಿಂಗಪ್ಪ ಹೋಟಕರ್ ಹಾಗೂ ಕೃಷಿ ಅಧಿಕಾರಿ ಡಾ. ಗುರುಪ್ರಸಾದ ಹಿರೇಮಠ ಮಾತನಾಡಿ, ಮಣ್ಣಿನಲ್ಲಿ ಫಲವತ್ತತೆಯ ಹಲವು ಅಂಶಗಳಿವೆ. ಅವುಗಳನ್ನು ಕಾಪಾಡಿಕೊಳ್ಳುವುದು ರೈತರ ಕರ್ತವ್ಯ. ತಿಳಿವಳಿಕೆ ಇಲ್ಲದೇ ಹೋದರೆ ಸಮೀಪದ ಕೃಷಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದರು.
ನಂತರ ರೈತರ ಹೊಲಗಳಿಗೆಭೇಟಿ ನೀಡಿ ಮಣ್ಣಿನ ಮಾದರಿ ತೆಗೆಯುವ ವಿಧಾನ ತಿಳಿಸಿಕೊಟ್ಟರು.
ಆತ್ಮ ಯೋಜನೆಯ ಅಧಿಕಾರಿ ಸಂತೋಷ ಮಾಳಿ, ರೈತರಾದ ನಾಗಪ್ಪ ಕ್ಯಾರಕೊಪ್ಪ, ಶಿವಯ್ಯ ಪೂಜಾರ, ಚನ್ನಪ್ಪ ಲಾಳಸಂಗಿ, ಜಗದೀಶ ಕಲ್ಲೂರ ಇತರರು ಉಪಸ್ಥಿತರಿದ್ದರು.