ಮುಂಡಗೋಡ: ನನ್ನ ಮಣ್ಣು ನನ್ನ ದೇಶ ಅಮೃತ ಕಳಸ ಯಾತ್ರೆ ನಿಮಿತ್ತ ಮಣ್ಣು ಸಂಗ್ರಹವನ್ನು ಸಿದ್ದಿ ಜನಾಂಗದವರು ಗುರುವಾರ ಬಸ್ ನಿಲ್ದಾಣದಲ್ಲಿ ಮಾಡಿದರು.
ಕೇಂದ್ರ ಸರ್ಕಾರದ ಯೋಜನೆಯಾಗಿರುವ ‘ನನ್ನ ಮಣ್ಣು, ನನ್ನ ದೇಶ, ಅಮೃತ ಕಳಶ’ ಯಾತ್ರೆಗೆ ಜನಜಾಗೃತಿ ಮೂಲಕ ಮಣ್ಣು ಸಂಗ್ರಹಿಸಿದರು. ಬಸ್ ನಿಲ್ದಾಣದ ಆವರಣದಲ್ಲಿ ಜಾಗೃತಿ ನೃತ್ಯ ನಡೆಸಿದ ಸಿದ್ದಿ ಮಹಿಳೆಯರು ಸಾರ್ವಜನಿಕರಿಂದ ಮಡಿಕೆಗಳಲ್ಲಿ ಮಣ್ಣು ಸಂಗ್ರಹಿಸಿದರು.