ಹಾಲಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ರಿವಾರ್ಡ್ ಯೋಜನೆಯಡಿ ರೈತರಿಗೆ ಮಣ್ಣು ಪರೀಕ್ಷೆ ಪತ್ರ ವಿತರಿಸಲಾಯಿತು. ಕೃಷಿ ಸಹಾಯಕ ರವಿಕುಮಾರ ಬಂಗಾರಿ, ಹರ್ಷಿತಾ ಜಿ.ಟಿ., ಅಕ್ಷತಾ ಪೂಜಾರಿ, ರಾಹುಲ್ ವಾಲಿಕಾರ, ವಿಠ್ಠಲ ತೋರಗಲ್, ಅಭಿಷೇಕ ದಳವಾಯಿ, ಗಿರಿಮಲ್ಲ ಹೊನಗೌಡ ಇತರರು ಇದ್ದರು. 
ಜಿಲ್ಲೆ

ಮಣ್ಣು ಪರೀಕ್ಷೆಯಿಂದ ಉತ್ತಮ ಬೆಳೆ ಸಾಧ್ಯ

ಪ್ರಶಾಂತ ಹೂಗಾರ

ಅರಟಾಳ: ರಿವಾರ್ಡ್ ಯೋಜನೆಯಡಿ ತೆಲಸಂಗ ಹೋಬಳಿ ವ್ಯಾಪ್ತಿಯ 4,640 ಹೆಕ್ಟೇರ್ ಭೂಪ್ರದೇಶದಲ್ಲಿ ಜಲಾನಯನ ಯೋಜನೆಯಿದ್ದು, ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಿ ಉತ್ತಮ ಬೆಳೆ ಬೆಳೆಯಬಹುದು ಎಂದು ಕೃಷಿ ಸಹಾಯಕ ರವಿಕುಮಾರ ಬಂಗಾರಿ ಹೇಳಿದರು.

ಸಮೀಪದ ಹಾಲಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ವಿಶ್ವಬ್ಯಾಂಕ್ ನೆರವಿನ ರಿವಾರ್ಡ್ ಯೋಜನೆಯಡಿ ಶುಕ್ರವಾರ ರೈತರಿಗೆ ಮಣ್ಣು ಪರೀಕ್ಷೆ ಪತ್ರಗಳನ್ನು ವಿತರಿಸಿ ಮಾತನಾಡಿ, ಮಣ್ಣು ಪರೀಕ್ಷೆಯಿಂದ ಯಾವ ಬೆಳೆ ಬೆಳೆದರೆ ಉತ್ತಮ ಇಳುವರಿ ಬರುತ್ತದೆ ಎಂಬುವುದು ತಿಳಿಯುತ್ತದೆ. ಕೃಷಿಯ ಸುಸ್ಥಿರತೆಗಾಗಿ ನವೀನ ಅಭಿವೃದ್ಧಿ ಮೂಲಕ ಜಲಾನಯನ ಪ್ರದೇಶಗಳನ್ನು ಪುನಃಶ್ಚೇತನಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಕೃಷಿ ಇಲಾಖೆ ಸಿಬ್ಬಂದಿ ಹರ್ಷಿತಾ ಜಿ.ಟಿ., ಅಕ್ಷತಾ ಪೂಜಾರಿ, ರಾಹುಲ್ ವಾಲಿಕಾರ, ವಿಠ್ಠಲ ತೋರಗಲ್, ಅಭಿಷೇಕ ದಳವಾಯಿ, ಗಿರಿಮಲ್ಲ ಹೊನಗೌಡ, ಗೌಡಪ್ಪ ಗೂಳಪ್ಪನವರ, ಶಿವಲಿಂಗ ಹೊನಗೌಡ, ನಿಂಗಪ್ಪ ದಡ್ಡಿ, ತಮ್ಮಣ್ಣ ಗೂಳಪ್ಪನವರ, ನಿಂಗಪ್ಪ ಹಿಪ್ಪರಗಿ, ಮಕ್ಬುಲ್ ಮುಲ್ಲಾ, ಮಹಾದೇವ ಅಥಣಿ ಇತರರು ಇದ್ದರು.