ಹಗರಿಬೊಮ್ಮನಹಳ್ಳಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಜಂಗಮ ಅರ್ಚಕ, ಪುರೋಹಿತರ ಸಂಘವನ್ನು ಶಾಸಕ ಎಸ್.ಭೀಮಾನಾಯ್ಕ ಉದ್ಘಾಟಿಸಿದರು.  
ಜಿಲ್ಲೆ

ಸಮಾಜಕ್ಕೆ ವೀರಶೈವ ಜಂಗಮರ ಕೊಡುಗೆ ಅಪಾರ- ಹಗರಿಬೊಮ್ಮನಹಳ್ಳಿ ಶಾಸಕ ಭೀಮನಾಯ್ಕ ಗುಣಗಾನ

ಹಗರಿಬೊಮ್ಮನಹಳ್ಳಿ: ಸಮಾಜ ಸಂಸ್ಕಾರಯುತವಾಗಿರಲು ವೀರಶೈವ ಜಂಗಮರ ಕೊಡುಗೆ ಅಪಾರವಾಗಿದ್ದು, ಸಮುದಾಯವು ಶೈಕ್ಷಣಿಕ, ಧಾರ್ಮಿಕ, ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಎಸ್.ಭೀಮಾನಾಯ್ಕ ಹೇಳಿದರು.

ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ವೀರಶೈವ ಜಂಗಮ ಅರ್ಚಕ ಮತ್ತು ಪುರೋಹಿತರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ವೀರಶೈವ ಜಂಗಮ ಸಮಾಜದ ಮುತ್ಸದ್ಧಿ ರಾಜಕಾರಣಿ ದಿ.ಎಂ.ಪಿ.ಪ್ರಕಾಶ್ ಪ್ರಭಾವ ನನ್ನ ಮೇಲೆ ವೈಯಕ್ತಿಕವಾಗಿ ಬೀರಿದೆ. ಸಂಘದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನಿವೇಶನ ಒದಗಿಸಿ, ಆರಂಭಿಕ ಹಂತದಲ್ಲಿ 10 ಲಕ್ಷ ರೂ. ಅನುದಾನ ಒದಗಿಸಲಾಗುವುದು. ಪಟ್ಟಣದಲ್ಲಿ ನೆನಗುದಿಗೆ ಬಿದ್ದಿರುವ ವೀರಶೈವ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, 25 ಲಕ್ಷ ರೂ. ಅನುದಾನ ಒದಗಿಸಲು ಸೂಚಿಸಲಾಗಿದೆ ಎಂದರು.

ವೇದಮೂರ್ತಿ ಬಸವರಾಜ ಶಾಸಿ ಮಾತನಾಡಿದರು. ಜಂಗಮ ಸಮಾಜದ ತಾಲೂಕಾಧ್ಯಕ್ಷ ಓ.ಎಂ.ಸುಭಾಷ್ ಚಂದ್ರಯ್ಯ ಶಾಸಿ, ಪ್ರಮುಖರಾದ ಪಂಚಮಸಾಲಿ ಸಮಾಜ ತಾಲೂಕು ಸಂಘದ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್, ಎಂ.ಪಿ.ಕೊಟ್ರೇಶ್, ಸೊನ್ನದ ವೀರಭದ್ರಯ್ಯ, ಜ್ಞಾನೇಶ್ವರಯ್ಯ, ಪಿ.ಎಂ.ನಾಗಯ್ಯ ಇತರರಿದ್ದರು.

ಉದ್ಘಾಟನೆಗೆ ಮುನ್ನ ಪಟ್ಟಣದ ಹಗರಿ ಆಂಜನೇಯ ದೇಗುಲದಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಶ್ರೀ ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.