ಗಂಗಾವತಿಯಲ್ಲಿ ದತ್ತಿ ನಿಧಿ ಪ್ರತಿಭಾಪುರಸ್ಕಾರ ಮತ್ತು ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಶಾಸಕಸ ಗಾಲಿ ಜನಾರ್ದನರೆಡ್ಡಿ ಉದ್ಘಾಟಿಸಿದರು. ದೇವಾಂಗ ಮಹಾಪೀಠ ಹೇಮಕೂಟದ ದಯಾನಂದಪುರಿ ಸ್ವಾಮೀಜಿ, ಸಂಘದ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಕಲಬುರಗಿ ಇತರರಿದ್ದರು. 
ಜಿಲ್ಲೆ

ಸಮಾಜದ ಏಳಿಗೆಗೆ ಸಂಘಟನಾತ್ಮಕವಾಗಿ ಶ್ರಮಿಸಿ

ಗಂಗಾವತಿ: ದೇವಾಂಗ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದ್ದು, ಸಂಘಟನಾತ್ಮಕವಾಗಿ ಸಮಾಜದ ಬೆಳವಣಿಗೆಗೆ ಯೋಜನೆ ರೂಪಿಸಿ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ನಗರದ ಶ್ರೀ ಚನ್ನಬಸವಸ್ವಾಮಿ ಕಲಾ ಮಂದಿರದಲ್ಲಿ ದೇವಾಂಗ ನೌಕರರ ಕ್ಷೇಮಾಭಿವೃದ್ಧಿ ಸಂಘ, ಡಾ.ಎಸ್.ಜಿ.ಬಿಜ್ಜಳ ಸ್ಮಾರಕ ಪ್ರತಿಷ್ಟಾನದಿಂದ

ಭಾನುವಾರ ಹಮ್ಮಿಕೊಂಡಿದ್ದ ದತ್ತಿ ನಿಧಿ ಪ್ರತಿಭಾಪುರಸ್ಕಾರ ಮತ್ತು ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಸ ಸಂಸ್ಕೃತಿ ಜಗತ್ತಿಗೆ ಪರಿಚಯಿಸಿದ ದೇವಾಂಗ ಸಮಾಜ ಕಷ್ಟ, ಸುಖದಲ್ಲಿ ಭಾಗಿಯಾಗಿ, ಅಭಿವದ್ಧಿ ಕಾರ್ಯಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ. ಸಮಾಜದ ಏಳಿಗೆಗೆ ಕುಲಗುರುಗಳ ಪಾತ್ರ ಮುಖ್ಯ. ಧಾರ್ಮಿಕ ಕಾರ್ಯಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುವಂತೆ ಸಲಹೆ ನೀಡಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಕಲಬುರಗಿ ಮಾತನಾಡಿ, ದೇವಾಂಗ ಸಮಾಜದ ಜನರು ಜಾಗತರಾಗಬೇಕಿದ್ದು, ಗುರು ಹಿರಿಯರನ್ನು ಗೌರವಿಸಿ. ಶೈಕ್ಷಣಿಕ ಮುಖ್ಯವಾಹಿನಿಗೆ ಬರುವಂತೆ ಸಲಹೆ ನೀಡಿದರು.

ಶ್ರೀ ದೇವಲ ದೇವಾಂಗ ಪುರಾಣ (ಮರುಮುದ್ರಿತ) ಗ್ರಂಥ ಬಿಡುಗಡೆಗೊಳಿಸಲಾಯಿತು. ದೇವಾಂಗ ಸಮಾಜದ ಪೀಠಾಧಪತಿಗಳಾದ ಹಂಪಿ ದೇವಾಂಗ ಮಹಾಪೀಠ ಹೇಮಕೂಟದ ದಯಾನಂದಪುರಿ ಸ್ವಾಮೀಜಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರಮುಖರಾದ ದೇವಾಂಗ ಮಠದ ಶಂಕರಯ್ಯ ಸ್ವಾಮಿ, ಸಂಘದ ಪದಾಧಿಕಾರಿಗಳಾದ ಮಂಜುನಾಥ ವಸ್ತ್ರದ, ಎಸ್. ಆರ್.ಸಿದ್ದಲಿಂಗ, ಪ್ರಹ್ಲಾದ ಗೌಡ, ವಾಸುದೇವ ಕೊಳಗದ, ಈರಣ್ಣ ಬೆಟಗೇರಿ, ವೆಂಕಟೇಶ, ಶಂಕ್ರಪ್ಪ ಪಂಪಣ್ಣ ಬೆಟಗೇರಿ, ರಾಮನಗೌಡ ಇದ್ದರು.