ಜಿಲ್ಲೆ

ಸಮಾಜದ ಅಜ್ಞಾನ ದೂರ ಸರಿಸಿದ ಶ್ರೇಷ್ಠ ಸಂತ

ತಲ್ಲೂರ: ಸಮಾಜದಲ್ಲಿನ ಜಾತಿ, ಮತ, ಕುಲ ತಾರತಮ್ಯವೆಂಬ ಅಜ್ಞಾನದ ಕತ್ತಲೆ ದೂರಸರಿಸಿ ಸಾಮರಸ್ಯ ಸಮಾನತೆಯ ಮೂಲಕ ಜ್ಞಾನವೆಂಬ ಬೆಳಕು ಚೆಲ್ಲಿದ ಸಂತ ಶ್ರೇಷ್ಠ ಕನಕದಾಸರು ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಸಮೀಪದ ಮದ್ಲೂರ ಗ್ರಾಮದ ಬೀರಸಿದ್ದೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಕನಕದಾಸರ ನೂತನ ಮೂರ್ತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಕನಕದಾಸರು ಸಮಾಜ ಸುಧಾರಕರು ಮಾತ್ರವಲ್ಲ. ಒಬ್ಬ ದಾರ್ಶನಿಕರಾಗಿ ಕನ್ನಡ ಭಾಷೆಯಲ್ಲಿ ಹರಿಭಕ್ತಸಾರ, ರಾಮಧ್ಯಾನ, ನಳ ಚರಿತ್ರೆ, ಮೋಹನ ತರಂಗಿಣಿ ಎಂಬ ಕತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.

ಯರಗಟ್ಟಿ ಎಪಿಎಂಸಿ ನಿರ್ದೇಶಕ ಸಿದ್ಧಾರೂಢ ಬಿಲಕಂಚಿ ಮಾತನಾಡಿ, ವಿಶ್ವಕ್ಕೆ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸಿದವರು ಸಂತ ಶ್ರೇಷ್ಠ ಕನಕದಾಸರು ಎಂದರು.

ಸವದತ್ತಿ ಬ್ರಹ್ಮಾನಂದ ಆಶ್ರಮದ ಶಿವಾನಂದ ಸ್ವಾಮೀಜಿ, ಬಸಯ್ಯ ಪೂಜೇರ ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯ ಲಕ್ಷ$್ಮಣ ಹೊಟ್ಟಿ ಅಧ್ಯತೆ ವಹಿಸಿದ್ದರು. ಜಿಪಂ ಮಾಜಿ ಸದಸ್ಯ ಕೀರಪ್ಪ ಹದ್ದನ್ನವರ, ಮುಖಂಡ ಮಾರುತಿ ಕುರಿ, ನಾಗಪ್ಪ ಸಾಲಿ, ವಕೀಲ ಗುಡುಸಾಬ ದೊಡಮನಿ, ಮಲ್ಲೇಶ ಕಲಕುಟ್ರಿ, ಸುಭಾನಿ ದೊಡಮನಿ, ಬಸವರಾಜ ಸುಣಗಾರ, ಆರ್​.ಕೆ.ಪಟಾತ, ಗೊಪಾಲ ಮೇಟಿ, ವಿಠ್ಠಲ ಅಗಸಿಮನಿ, ಮಹಾದೇವ ಮುರಗೋಡ, ಸುರೇಶ ಹೊಟ್ಟಿ, ಬಸವರಾಜ ಮನಿಕಟ್ಟಿ, ಯಲ್ಲಪ್ಪ ನರಿ, ಸಿದ್ದಪ್ಪ ಕುರಿ ಇತರರಿದ್ದರು. ವಿಠ್ಠಲ ಪಚ್ಚಿನವರ ನಿರೂಪಿಸಿ, ವಂದಿಸಿದರು.