ಕಾಗವಾಡ: ತಾಲೂಕಿನ ಶಿರಗುಪ್ಪಿ ಗ್ರಾಮದ ಶ್ರೀಶಾಂತಿಸಾಗರ ಕ್ರೆಡಿಟ್ ಸೌಹಾರ್ದ ಸಹಕಾರಿ ಪ್ರಧಾನ ಕಚೇರಿ ಸದಸ್ಯರಿಗೆ ಹಾಗೂ ಎಲ್ಲ ಶಾಖೆಗಳ ಸಿಬ್ಬಂದಿಗೆ ಪಟ್ಟಣದ ವಿದ್ಯಾಸಾಗರ ಶಿಕ್ಷಣ ಸಂಸ್ಥೆ ಸಭಾಭವನದಲ್ಲಿ ಈಚೆಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾಗವಾಡ, ಕಬ್ಬೂರ, ಶೇಡಬಾಳ, ಸದಲಗಾ, ಇಂಗಳಿ, ಬನಜವಾಡ, ಮೊಳವಾಡ, ಚಿಂಚಲಿ ಶಾಖೆಗಳ ಸಲಹಾ ಸಮಿತಿಯ ಸದಸ್ಯರು, ಪ್ರಧಾನ ಶಾಖೆ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರಿಗೆ ಹರಿಹರದ ಕಿರ್ಲೋಸ್ಕರ್ ಕಂಪನಿಯ ಡಾ.ನಂದೀಶ ಹಿರೇಮಠ ತರಬೇತಿ ನೀಡಿದರು.
ಪ್ರಧಾನ ಶಾಖೆ ಅಧ್ಯಕ್ಷ ವಿ.ಡಿ.ಮಾಣಗಾಂವೆ, ಉಪಾಧ್ಯಕ್ಷ ಪುರಂದರ ಕನವಾಡೆ, ನಿರ್ದೇಶಕ ಡಾ.ಎಂ.ಎನ್.ಭೋಮಾಜ, ಸಾಗರ ದುಗ್ಗೆ, ಮಹಾವೀರ ಮಾದನ್ನವರ, ಅಶ್ವತ ಪಾಟೀಲ, ಧನಪಾಲ ಬೋರಗಾಂವೆ, ಸುನೀಲ ಕುರುಂದವಾಡೆ, ಬಾಬಾಸಾಬ ಕಾಗವಾಡೆ, ಆದಿನಾಥ ಮುಗಳಖೋಡ, ದಾದಾ ಬನಜವಾಡೆ, ಸುನೀಲ ಪಾಟೀಲ, ಭಗವಂತ ಡಿಗ್ರಜೆ, ಶ್ರೀಕಾಂತ ಬೋರಗಾಂವೆ, ಕಲ್ಲಪ್ಪ ಐತವಾಡೆ, ವಿದ್ಯಾಸಾಗರ ಚೌಗುಲೆ, ಪ್ರವೀಣ ಹುಕ್ಕೇರಿ ಇತರರಿದ್ದರು. ಅನಂತಕುಮಾರ ಐನಾಪುರೆ ಸ್ವಾಗತಿಸಿದರು. ಶಿಕ್ಷಕ ರಾಹುಲ ಕಟ್ಟಿ ಪರಿಚಯಿಸಿದರು. ಶಿಕ್ಷಕ ಎಸ್.ಎಸ್.ಜಮಖಂಡಿ ನಿರೂಪಿಸಿದರು.