ಜಿಲ್ಲೆ

ತನಿಖೆ ಬಳಿಕ ಅಗತ್ಯ ಕ್ರಮದ ಯೋಚನೆ - ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿಕೆ

Mangaluru - Nishantha Narayana

ಪುತ್ತೂರು: ಮಾದರಿ ಸಹಕಾರಿ ಸಂಘದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಸಾಲ ನೀಡಿದ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆ, ಕೇಂದ್ರ ಜಿಲ್ಲಾ ಬ್ಯಾಂಕ್ ತನಿಖೆ ನಡೆಸುತ್ತಿದೆ. ತನಿಖೆ ವರದಿ ಬಂದ ಬಳಿಕ ಹಿರಿಯರೆಲ್ಲಾ ಸೇರಿ ಯೋಚನೆ ಮಾಡುತ್ತೇವೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ. ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮಕ್ಕೆ ಬಿಜೆಪಿ ಹಿಂದೇಟು ಹಾಕಿದ್ದರಿಂದ ಇಡ್ಕಿದು ಗ್ರಾಮದ ಹಿರಿಯರು ತೀವ್ರ ಅಸಮಾಧಾನಗೊಂಡು ಪರ್ಯಾಯ ಶಕ್ತಿಯ ಉದಯಕ್ಕೆ ಚಿಂತನೆ ನಡೆಸಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಸಹಕಾರಿ ಕ್ಷೇತ್ರವನ್ನು ಗಮನಿಸುವುದಕ್ಕೆ ಸಹಕಾರ ಭಾರತಿಯಿದ್ದು, ಬಿಜೆಪಿ ಅದಕ್ಕೆ ಬೆಂಬಲ ನೀಡುತ್ತದೆ. ಬಹಳಷ್ಟು ಹಿರಿಯರು ಕೂಡ ಇದ್ದಾರೆ. ನಾವು ಅಲ್ಲೇ ಮುಗಿಸಿಕೊಳ್ಳುವ, ಜೀರ್ಣಿಸಿಕೊಳ್ಳುವ ಕೆಲಸವನ್ನು ನಮ್ಮವರು ಮಾಡುತ್ತಾರೆ ಎಂದರು.