ಪುತ್ತೂರು: ಮಾದರಿ ಸಹಕಾರಿ ಸಂಘದಲ್ಲಿ ನಿಯಮಗಳನ್ನು ಗಾಳಿಗೆ ತೂರಿದ ಸಾಲ ನೀಡಿದ ವಿಚಾರದಲ್ಲಿ ತನಿಖೆ ಕೈಗೊಂಡ ಜಿಲ್ಲಾ ಕೇಂದ್ರ ಸಹಕಾರಿಯ ಅಧಿಕಾರಿಗಳು ಮೊದಲ ಹಂತದ ವರದಿಯನ್ನು ಸಹಕಾರ ಇಲಾಖೆಗೆ ನೀಡಿದ್ದಾರೆ.
ಅಡವಿಟ್ಟ ಬಂಗಾರ ಹಾಗೂ ಅಡಕೆ ಪ್ರಮಾಣವನ್ನು ಮಾತ್ರ ತಪಾಸಣೆ ಮಾಡುವ ಹಕ್ಕು ಹೊಂದಿದ್ದು, ನೈಜತೆಯ ಪರಿಶೀಲನೆಯನ್ನು ಸಹಕಾರ ಇಲಾಖೆ ಅಧಿಕಾರಿಗಳು ನಡೆಸಬೇಕಾಗಿದೆ. ಈ ನಡುವೆ ಕೆಲವು ಮಂದಿ ಸದಸ್ಯರು ಹಸಿ ಅಡಕೆಯನ್ನು, ಕಳಪೆಗುಣಮಟ್ಟದ ವಿದೇಶಿ ಅಡಕೆ ದಾಸ್ತಾನು ಕೊಠಡಿಗೆ ಏಕಾಏಕಿ ವರ್ಗಾಯಿಸಿದ್ದರು ಎಂಬ ಮಾತು ಕೇಳಿಬರುತ್ತಿದೆ. ಕೆಲವು ವ್ಯಕ್ತಿಗಳು ಊರಿನಿಂದ ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿರುವುದು ಇನ್ನಷ್ಟು ಅನುಮಾನಕ್ಕೆ ಎಡೆ ಮಾಡಿದೆ.