ಪುತ್ತೂರು: ಮಾದರಿ ಸಹಕಾರಿ ಸಂಘದಲ್ಲಿ ನಿಯಮಗಳನ್ನು ಗಾಳಿಗೆ ತೂರಿದ ಸಾಲ ನೀಡಿದ ವಿಚಾರದಲ್ಲಿ ಸರಿಯಾದ ತನಿಖೆ ನಡೆಸಲು ಎಸ್‌ಐಟಿ ರಚಿಸುವಂತೆ ರೈತ ಸಂಘ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.
ಸಹಕಾರಿಗಳಿಂದ ಗ್ರಾಮದ ಅಭಿವೃದ್ಧಿಗೆ ಸಹಕಾರಿ ಎಂದು ತಿಳಿದಿದ್ದರೂ, ಅದಲ್ಲಿ ಬೇರೆ ವ್ಯವಹಾರ ಹೆಚ್ಚಾಗುತ್ತಿದೆ. ಸಿ ಕ್ಲಾಸ್ ಸದಸ್ಯರಿಗೆ ನಿಗದಿಗಿಂತ ಅಧಿಕ ಮೊತ್ತದ ಸಾಲಗಳನ್ನು ನೀಡಲಾಗುತ್ತಿದೆ. ಶೂನ್ಯ ಬಡ್ಡಿ ದರದ ಸಾಲಕ್ಕೆ ೪ರಿಂದ ೫ ಸಾವಿರ ಹಣವನ್ನು ಪಡೆದು ರಶೀದಿ ನೀಡದೆ ವಂಚಿಸಲಾಗುತ್ತಿದೆ. ಸಹಕಾರ ಇಲಾಖೆಯ ಎ.ಆರ್. ಹಾಗೂ ಡಿ. ಆರ್. ಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿದೆ. ಈ ಎಲ್ಲ ಕಾರಣದಿಂದ ತಕ್ಷಣ ವಿಶೇಷ ತನಿಖಾ ತಂಡ ರಚಿಸಿ ತನಿಖೆಗೊಳಪಡಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.