ಜಿಲ್ಲೆ

ಸಹಕಾರಿಯಲ್ಲಿ ಮುಂದುವರಿದ ತನಿಖೆ

Mangaluru - Nishantha Narayana

ಪುತ್ತೂರು: ವಿಟ್ಲ ಹೋಬಳಿಯ ಮಾದರಿ ಸಹಕಾರಿ ಸಂಘದಲ್ಲಿ ನಿಯಮಗಳನ್ನು ಗಾಳಿಗೆ ಚಿನ್ನಾಭರಣ ಅಡಮಾನ ಸಾಲ ನೀಡಿರುವ ಆರೋಪದ ಕುರಿತು ತನಿಖೆ ತೀವ್ರಗೊಂಡಿದೆ. ಎರಡನೇ ದಿನಕ್ಕೆ ವಿಸ್ತರಣೆಯಾದ ತನಿಖೆ ಇನ್ನೂ ಕೆಲವು ದಿನ ನಡೆಯುವ ಸಾಧ್ಯತೆಯಿದೆ.

ಸಂಘದ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ತನಿಖೆ ಸಂದರ್ಭ ಆರೋಪಕ್ಕೆ ಪುಷ್ಟಿ ನೀಡುವ ಕೆಲವೊಂದು ಮಾಹಿತಿಗಳು ಲಭಿಸಿವೆ ಎಂದು ಹೇಳಲಾಗಿದೆ. ಜಿಲ್ಲಾ ಕೇಂದ್ರ ಸಹಕಾರಿಯ ಅಧಿಕಾರಿಗಳ ತಂಡದಿಂದ ವ್ಯವಹಾರಗಳ ಮಾಹಿತಿಯನ್ನು ಸಂಗ್ರಹಿಸುವ ಕಾರ್ಯವನ್ನು ಗುರುವಾರ ಶಾಖಾ ಕಚೇರಿಯಲ್ಲಿ ನಡೆಸಿದ್ದಾರೆ. ಈ ಸಂದರ್ಭ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶಾಖಾ ಮುಖ್ಯಸ್ಥ ಹಾಗೂ ಸಂಘದ ಅಧ್ಯಕ್ಷ ಹಾಜರಿದ್ದರು.

ಉದ್ಯಮಿಗಳೂ ತನಿಖೆಯ ಸಂದರ್ಭ ಹಾಜರಿದ್ದುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ರೀತಿ ನಿಯಮ ಮೀರಿ ಸಾಲ ನೀಡಲು ವಿರೋಽಸಿದವರನ್ನು ದೂರು ಇಡುವ ಕಾರ್ಯವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ತನಿಖೆ ಸಂದರ್ಭ ಆಡಳಿತ ಮಂಡಳಿಯ ಸದಸ್ಯರು ಹಾಜರಿಲ್ಲದೇ ಇರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.