ಸಿಂಧನೂರು: ಸಮಾಜಕ್ಕೆ ಬೆಳಕು ನೀಡುವ ಕಾವ್ಯಗಳು ರಚನೆಯಾಗಬೇಕು ಎಂದು ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ ಹೇಳಿದರು.
ಜಿಲ್ಲಾ ಮತ್ತು ತಾಲೂಕು ಕಸಾಪ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಸಹಯೋಗದೊಂದಿಗೆ ನಗರದ ಸನ್‌ರೈಸ್ ಡಿ.ಫಾರ್ಮಸಿ, ನರ್ಸಿಂಗ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಹುಭಾಷಾ ಕವಿಗೋಷ್ಠಿ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ, ತೆಲುಗು, ಮರಾಠಿ, ಬಂಗಾಲಿ, ಹಿಂದಿ, ಸಂಸ್ಕೃತ ಸೇರಿ ಭಾಷಾವಾರು ಕವಿಗಳನ್ನು ಹುಡುಕಿ ಕವಿಗೋಷ್ಠಿ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಮಾತನಾಡಿದರು. ಕವಿಗೋಷ್ಠಿಯಲ್ಲಿ ಮಾನಸ ಕಾರಟಗಿ, ಶರಭಯ್ಯಸ್ವಾಮಿ, ವಿಶ್ವನಾಥ ಬಿಸ್ವಾಸ್, ವೀರೇಶ, ಮಹ್ಮದ್ ಶರ್ಫುದ್ದೀನ್ ಸೇರಿ ಇತರರು ಕವನ ವಾಚಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ತಾಲೂಕು ಅಧ್ಯಕ್ಷ ಟಿ.ಹುಸೇನ್ ಸಾಬ್, ಶರಭಯ್ಯಸ್ವಾಮಿ ತುರ್ವಿಹಾಳ, ಪ್ರಾಚಾರ್ಯ ಚಕ್ರವರ್ತಿ, ನಿವೃತ್ತ ಶಿಕ್ಷಕ ಮಹ್ಮದ್ ಶರ್ಫುದ್ದೀನ್ ಸಾಬ್, ರಾಮಕೃಷ್ಣ ಭಜಂತ್ರಿ, ಆನಂದಿ ಲಾಹೋಟಿ, ವಿಶ್ವನಾಥ ಬಿಸ್ವಾಸ್, ಇರ್ಷಾದ್ ಕೆ. ಇದ್ದರು. ಕಾರುಣ್ಯಾಶ್ರಮದ ಕಾರ್ಯಾಧ್ಯಕ್ಷ ಡಾ.ಚನ್ನಬಸಯ್ಯಸ್ವಾಮಿ ಹಿರೇಮಠ, ಆಶಾಕಿರಣ ಅನಾಥ ಹಾಗೂ ಬಡ ಮಕ್ಕಳ ವಸತಿ ನಿಲಯದ ಅಧ್ಯಕ್ಷ ಚಂದ್ರಗೌಡ, ಸಮಾಜ ಸೇವಕ ಉಸ್ಮಾನ್‌ಪಾಷಾ, ಚಕ್ರವರ್ತಿ, ಮಕಂದರ, ಸುಮಿತ್ರಾ ರಮೇಶ ಅವರನ್ನು ಸನ್ಮಾನಿಸಲಾಯಿತು.