ಬೆಳಗಾವಿಯ ಪಂತನಗರ ಶಿವಾಲಯದಲ್ಲಿ ಭಾನುವಾರ ಜಿಲ್ಲಾ ಗ್ರಾಮಾಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ ತಮ್ಮ ಜನ್ಮದಿನ ಪ್ರಯುಕ್ತ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿದರು. ದಯಾನಂದ ದಯಣ್ಣವರ, ಎಫ್.ಎಸ್.ಸಿದ್ದನಗೌಡರ, ಸಂತೋಷ ದೇಶನೂರ, ಯಲ್ಲೇಶ ಕೋಲಕಾರ ಇತರರಿದ್ದರು. 
ಜಿಲ್ಲೆ

ಸಾಮಾಜಿಕ ಕಾರ್ಯದಿಂದ ನೆಮ್ಮದಿ

ಶಂಕರ ಗೆಜ್ಜಿ

ಬೆಳಗಾವಿ: ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಜನ್ಮದಿನಕ್ಕೆ ಪಾವಿತ್ರೃವಿದೆ. ಹೀಗಾಗಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ, ದೀನ ದುರ್ಬಲರಿಗೆ ಸಹಾಯ ಮಾಡಿ ಸಾಮಾಜಿಕ ಸೇವೆಯೊಂದಿಗೆ ಜನ್ಮದಿನ ಆಚರಿಸಿಕೊಂಡಲ್ಲಿ ಜೀವನ ಸಾರ್ಥಕವಾಗುತ್ತದೆ ಎಂದು ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ ಹೇಳಿದರು.

ಸಮೀಪದ ಬಸವಣ ಕುಡಚಿಯಲ್ಲಿರುವ ವೃದ್ಧಾಶ್ರಮದಲ್ಲಿ ಭಾನುವಾರ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡುವ ಮೂಲಕ ತಮ್ಮ 51ನೇ ಜನ್ಮದಿನ ಆಚರಿಸಿಕೊಂಡು ಮಾತನಾಡಿದರು. ಸಮಾಜದಲ್ಲಿ ಮಕ್ಕಳ ಪ್ರೀತಿ ವಂಚಿತ ಹಾಗೂ ಅಸಹಾಯಕರಾದ ವೃದ್ಧರಿಗೆ ಗೌರವ ಕೊಡುವುದು ಎಲ್ಲರ ಕರ್ತವ್ಯ. ದೇವರು ಕೊಟ್ಟ ಸಂಪತ್ತಿನ ಸ್ವಲ್ಪ ಭಾಗವನ್ನು ಸತ್ಕಾರ್ಯಕ್ಕೆ ಉಪಯೋಗಿಸಿದರೆ ಮಾನಸಿಕ ನೆಮ್ಮದಿ ಹಾಗೂ ಐಶ್ವರ್ಯ ದ್ವಿಗುಣವಾಗಬಲ್ಲದು ಎಂದರು.

ಉಚಿತ ಆರೋಗ್ಯ ತಪಾಸಣೆ: ಪಂತನಗರದ ಶಿವಾಲಯದಲ್ಲಿ ಕಾಲೇಜ್ ವಿದ್ಯಾರ್ಥಿಗಳ ಆರೋಗ್ಯ ಉಚಿತ ತಪಾಸಣೆಯನ್ನು ಡಾ.ಗುರುಪ್ರಸಾದ ಕೋತಿನ್ ಕೈಗೊಂಡು, ವಿದ್ಯಾರ್ಥಿಗಳಿಗೆ ಪ್ರೋಟಿನ್ ಪೌಡರ್, ಪೌಷ್ಟಿಕಾಂಶದ ಮಾತ್ರೆ ಮತ್ತು ಸಿರ್ ನೀಡಿದರು.

ವಕೀಲ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಮಯದ ಮಹತ್ವ ಅರಿತುಕೊಳ್ಳಬೇಕು. ಮೋಜು-ಮಸ್ತಿ ಎನ್ನದೆ ಶಿಸ್ತುಬದ್ಧ ಅಧ್ಯಯನದಿಂದ ಮುಂದೆ ಸಾಗಿದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದರು.

ನಿವೃತ್ತ ಶಿಕ್ಷಕ ದಯಾನಂದ ದಯಣ್ಣವರ ಮಾತನಾಡಿದರು. ಮಾರಿಹಾಳ ಪಿಕೆಪಿಎಸ್ ನಿರ್ದೇಶಕರು, ಸಿಬ್ಬಂದಿ ಹಾಗೂ ವಿವಿಧ ಕಾರ್ಮಿಕರು, ಜನಪ್ರತಿನಿಧಿಗಳು, ಹಿತೈಷಿಗಳು ಮಲ್ಲಿಕಾರ್ಜುನ ಮಾದಮ್ಮನವರ ಅವರನ್ನು ಸತ್ಕರಿಸಿ ಜನ್ಮದಿನ ಶುಭಾಶಯ ಕೋರಿದರು. ಸಂತೋಷ ದೇಶನೂರ, ಯಲ್ಲೇಶ ಕೋಲಕಾರ, ಈರಣ್ಣ ವೀರಶೆಟ್ಟಿ, ಆನಂತ ಸಾಳುಂಕೆ, ಸಿದ್ದರಾಮ ತಲ್ಲೂರ, ಡಾ.ಎಂ.ಸಿ.ಹಿರೇಮಠ, ಆನಂದ ನಿರ್ವಾಣಿ, ಬಸವರಾಜ ಗಣಿಕೊಪ್ಪ, ಕಾಡಯ್ಯ ಸಾಲಿಮಠ ಇತರರಿದ್ದರು.