ಸಾರ್ವಜನಿಕ ಗ್ರಂಥಾಲಯ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಭೂಮಿ ಪೂಜೆ ನೆರವೇರಿಸಿದರು. ಬಿ.ಕೆ.ಶಿವಕುಮಾರ್, ಬಿ.ವಿ.ದಿನೇಶ್‌ಕುಮಾರ್, ಕೆಂಪೇಗೌಡ, ವನಮಾಲ ಇತರರಿದ್ದರು. 
ಜಿಲ್ಲೆ

ಮಾನವೀಯತೆಯಿಂದ ಸಮಾಜಮುಖಿ ಕಾರ್ಯ

ಜಿ.ಹೆಚ್. ಧನ್ಯಕುಮಾರ್

ತರೀಕೆರೆ: ಜೀವನದಲ್ಲಿ ಮಾನವೀಯತೆ ಅಳವಡಿಸಿಕೊಂಡರೆ ಮಾತ್ರ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಾಧ್ಯ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ತಾಲೂಕಿನ ಗೋಪಾಲ ಕಾಲನಿ ಗ್ರಾಮದಲ್ಲಿ ಬಾಗಸಾಲೆ ವೀರಭದ್ರಪ್ಪ ಸ್ಮರಣಾರ್ಥ ಅವರ ಕುಟುಂಬಸ್ಥರು 4 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಎಲ್ಲವನ್ನು ಸರ್ಕಾರದಿಂದ ನಿರೀಕ್ಷಿಸುವುದು ಸಲ್ಲದು. ಜೀವನದಲ್ಲಿ ಉತ್ತಮ ಚಿಂತನೆ ಅಳವಡಿಸಿಕೊಳ್ಳಬೇಕು. ವೈಯಕ್ತಿಕ ಪ್ರಗತಿ ಜತೆ ಸಮಾಜದ ಸರ್ವಾಂಗೀಣ ಅಭಿವೃದ್ಧಿ ದೂರದೃಷ್ಠಿ ಹೊಂದಿರಬೇಕು. ಸಮಾಜದ ಏಳಿಗೆಗಾಗಿ ಬಾಗಸಾಲೆ ವೀರಭದ್ರಪ್ಪ ಕುಟುಂಬಸ್ಥರು ತೆಗೆದುಕೊಂಡ ನಿರ್ಧಾರ ಪ್ರತಿಯೊಬ್ಬರಿಗೂ ಮಾದರಿ. ಈ ದಿಸೆಯಲ್ಲಿ ಪ್ರಯತ್ನಗಳು ನಡೆಯಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಲತಾ, ಎಂ.ಸಿ.ಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ.ಶಿವಕುಮಾರ್, ಮಾಜಿ ತಾಪಂ ಸದಸ್ಯ ಕೆಂಪೇಗೌಡ, ಪಿಡಿಒ ಬಿ.ಡಿ.ಚೇತನ್, ದಾನಿ ವನಮಾಲ, ವಕೀಲ ಬಿ.ವಿ.ದಿನೇಶ್‌ಕುಮಾರ್ ಮತ್ತಿತರರಿದ್ದರು.