ಜಿಲ್ಲೆ

ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದಿಂದ ಸಮಾಜಮುಖಿ ಕೆಲಸ

ಅವಿನಾಶ್ ಜೈನಹಳ್ಳಿ

ಮೈಸೂರು: ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದು ಸಂಸ್ಕೃತ ವಿದ್ವಾಂಸ ಡಾ.ಗುರುಪಾದ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನೇಕರು ಸಂಘವನ್ನು ಹುಟ್ಟುಹಾಕಿ, ಬೆಳೆಸಿಕೊಂಡು ಬಂದಿದ್ದಾರೆ. ಅನೇಕರ ಪರಿಶ್ರಮದಿಂದ ಗೌರವಯುತವಾಗಿ ಸಂಘ ಮೇಲೆ ಬರಲು ಸಾಧ್ಯವಾಗಿದೆ. ಸಂಘದ ಆವರಣದಲ್ಲೂ ಎಲ್ಲ ರೀತಿಯ ಅಭಿವೃದ್ಧಿ ಕೆಲಸವಾಗಿದೆ. ಸಭಾ ಭವನ, ಉತ್ತರ ಕನ್ನಡದಿಂದ ಬಂದವರಿಗೆ ಉಳಿದುಕೊಳ್ಳಲು ಕೊಠಡಿ ವ್ಯವಸ್ಥೆ, ಗ್ರಂಥಾಲಯ ಹೀಗೆ ಎಲ್ಲ ವ್ಯವಸ್ಥೆಯೂ ಇರುವುದು ಖುಷಿಯಾಗಿದೆ. ಆರ್ಥಿಕ, ಬೌದ್ಧಿಕವಾಗಿ ಸದಾ ಸಂಘದ ಜತೆ ಇರುತ್ತೇನೆ ಎಂದು ತಿಳಿಸಿದರು.
ಉದ್ಯಮಿ ಜಗನ್ನಾಥ ಶೆಣೈ, ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲೆಗಳ ಸಂಘಗಳ ಒಕ್ಕೂಟದ ಅಧ್ಯಕ್ಷ ಗ್ರೇಶಿಯನ್ ರೋಡ್ರಿಗಸ್, ಕಾರ್ಯದರ್ಶಿ ನಾರಾಯಣ ವಿ.ಹೆಗಡೆ, ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ.ನಾರಾಯಣ ಹೆಗಡೆ ಇತರರಿದ್ದರು.
ಇದೇ ವೇಳೆ ಸಂಘದ ಅಭಿವೃದ್ಧಿಗೆ ಶ್ರಮಿಸಿದ ಅನೇಕರನ್ನು ಸನ್ಮಾನಿಸಲಾಯಿತು.