ಮದ್ದೂರು: ಸುಮುಖ ಸೇವಾ ಟ್ರಸ್ಟ್ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಅನುಕೂಲ ಕಲ್ಪಿಸಿದೆ ಎಂದು ಸುಮುಖ ನಿಧಿ ಲಿಮಿಟೆಡ್ ಅಧ್ಯಕ್ಷ ಕುಂದನಕುಪ್ಪೆ ಕುಮಾರ್ ತಿಳಿಸಿದರು.
ತಾಲೂಕಿನ ಕೆ.ಹೊನ್ನಲಗೆರೆಯಲ್ಲಿ ಭಾನುವಾರ ಸುಮುಖ ಸೇವಾಟ್ರಸ್ಟ್, ಸುಮುಖ ನಿಧಿ ಲಿಮಿಟೆಡ್ ಹಾಗೂ ಶಂಕರ್ ಕಣ್ಣಿನ ಆಸ್ಪತ್ರೆ ಬೆಂಗಳೂರು ವತಿಯಿಂದ 60 ಕ್ಕೂ ಹೆಚ್ಚು ಜನರಿಗೆ ಉಚಿತ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸುವುದರ ಜತೆಗೆ ಉಚಿತವಾಗಿ ಕನ್ನಡಕವನ್ನು ವಿತರಿಸಿ ಮಾತನಾಡಿದರು.
ಸುಮುಖ ಸೇವಾಟ್ರಸ್ಟ್ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಶಾಲೆಗಳ ಹಾಗೂ ರಸ್ತೆಗಳ ಬದಿಯಲ್ಲಿ ಗಿಡನೆಡುವುದು, ರಕ್ತದಾನ ಶಿಬಿರ, ಪ್ರತಿಭಾ ಪುರಸ್ಕಾರ, ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ಸೇರಿದಂತೆ ಅನೇಕ ಕಾರ್ಯಕ್ರಮ ನಡೆಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.
ಸುಮುಖ ಸೇವಾ ಟ್ರಸ್ಟ್ ಅಧ್ಯಕ್ಷ ತೈಲೂರು ರಘು, ಡಾ.ಮಹೇಶ್, ಪದಾಧಿಕಾರಿಗಳಾದ ಕೊಕ್ಕರೆಬೆಳ್ಳೂರು ಮಹೇಶ್, ಕೇಬಲ್ ಸತೀಶ್, ಶಿವಾದಾಸ್ ಸತೀಶ್, ಪೊಲೀಸ್ ಸಿದ್ದರಾಜು, ಶಂಕರೇಗೌಡ, ಶ್ರೀನಿವಾಸ್ ರವಿ, ಕೆ. ಹೊನ್ನಲಗೆರೆ ಪ್ರಾಥಮಿಕ ಕೇಂದ್ರದ ಸಿಬ್ಬಂದಿ ವರ್ಗ ಹಾಜರಿದ್ದರು.