ಭಟ್ಕಳ: ತಾಲೂಕು ನೌಕರರ ಸಂಘವು ವಿವಿಧ ಸಾಮಾಜಿಕ, ಶೈಕ್ಷಣಿಕ, ಧಾರ್ವಿುಕ ಕಾರ್ಯಗಳಲ್ಲಿ ತೊಡಗಿಕೊಂಡು ತಮ್ಮ ಕರ್ತವ್ಯದೊಂದಿಗೆ ಸಾರ್ವಜನಿಕರಿಗೆ ಸೇವೆ ನೀಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಬೇಂಗ್ರೆಯಲ್ಲಿ ಕರ್ನಾಟಕ ನೌಕರರ ಸಂಘದ 2024ರ ನೂತನ ವರ್ಷದ ವರ್ಣರಂಜಿತ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನೌಕರರ ಸಂಘ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ. ಬರ ಪರಿಸ್ಥಿತಿ, ಗೋಶಾಲೆ, ಪ್ರಕೃತಿ ವಿಕೋಪ, ಸಂಘದ ಬಡ ವಿದ್ಯಾರ್ಥಿಗಳಿಗೆ ಸಹಾಯ ಸೇರಿ ವಿವಿಧ ರೀತಿಯಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಸರ್ಕಾರದ ಎಲ್ಲ ಅಭಿವೃದ್ಧಿ ಕಾರ್ಯಗಳಲ್ಲೂ ನೌಕರರು ಉತ್ಸಾಹದಿಂದ ಪಾಲ್ಗೊಂಡು ಸರ್ಕಾರದ ಯೋಜನೆಗಳನ್ನು ಜನರಲ್ಲಿ ತಲುಪಿಸಲು ಮಹತ್ತರವಾಗಿ ಶ್ರಮಿಸುತ್ತಿದ್ದಾರೆ. ಅದರಲ್ಲೂ ಭಟ್ಕಳದ ಸಂಘ ಮುಂಚೂಣಿಯಲ್ಲಿದ್ದು, ಅಧ್ಯಕ್ಷ ಮೋಹನ ನಾಯ್ಕ ಅವರ ನೇತೃತ್ವದಲ್ಲಿ ಉತ್ತಮವಾಗಿ ಸಂಘಟಿತಗೊಂಡಿದೆ. ಸದಸ್ಯರಿಗೆ ಕ್ಯಾಲೆಂಡರ್ ವಿತರಿಸುವ ಮೂಲಕ ಮಹತ್ತರವಾದ ಮಾಹಿತಿಯನ್ನು ಕ್ಯಾಲೆಂಡರ್ ಒಳಗೊಂಡಿದೆ ಎಂದು ಭಟ್ಕಳದ ನೌಕರರ ಸಂಘದ ಪದಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.
ಅಧ್ಯಕ್ಷ ಮೋಹನ ನಾಯ್ಕ, ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ ಇತರ ಪದಾಧಿಕಾರಿಗಳಾದ ಗಣೇಶ ಹೆಗಡೆ, ಕೇಶವ ಮೊಗೇರ, ಮಂಜುನಾಥ ನಾಯ್ಕ, ಇತರರಿದ್ದರು.