ಉಡುಪಿ: ರಾಜ್ಯದಲ್ಲಿ 1.80 ಕೋಟಿ ಕಾರ್ಮಿಕರು ಅಸಂಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಸದಾಗಿ ವಿವಿಧ ಮಂಡಳಿಗಳನ್ನು ರಚಿಸಲಾಗುತ್ತಿದ್ದು, ಈ ಮೂಲಕ 1.20 ಕೋಟಿ ಮಂದಿ ಸಾಮಾಜಿಕ ಕಲ್ಯಾಣ ಯೋಜನೆ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.
ಜಿಪಂ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸ್ ಚಾಲಕರು, ಟೆಂಪೋ ಚಾಲಕರು, ಲಾರಿ, ರಿಾ, ಕಾರು ಸೇರಿ ರಾಜ್ಯದಲ್ಲಿ 35 ಲಕ್ಷ ಮಂದಿ ಕಮರ್ಷಿಯಲ್ ಲೈಸೆನ್ಸ್ ಪಡೆದವರಿದ್ದಾರೆ. ಕ್ಲೀನರ್ಗಳು, ಗ್ಯಾರೇಜ್ ಮೆಕಾನಿಕ್, ಟೈಯರ್ ಅಂಗಡಿವರು ಸೇರಿ 50 ರಿಂದ 55 ಲಕ್ಷ ಮಂದಿ ಇದ್ದಾರೆ. ಟ್ರನ್ಸ್ೋರ್ಟ್ ಬೋರ್ಡ್ನಿಂದ ನೇರವಾಗಿ 50 ಲಕ್ಷ ಜನರಿಗೆ ಅನುಕೂಲವಾಗಲಿದೆ. ಅದೇರೀತಿ ಸಿನಿಬಿಲ್ ಮೂಲಕ ಸಿನೆಮಾ ಕ್ಷೇತ್ರದಲ್ಲಿರು ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ವಿವಿಧ ಸವಲತ್ತು ಲಭಿಸಲಿದೆ. ಮನೆಕೆಲಸ ವೃತ್ತಿಯಲ್ಲಿ 20 ಲಕ್ಷ ಮಂದಿ ಇದ್ದಾರೆ ಎಂಬುದಾಗಿ ಅಂದಾಜಿಸಲಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 45 ಲಕ್ಷ ಸದಸ್ಯರಿದ್ದಾರೆ. ಇವರೆಲ್ಲರಿಗೂ ಯುನಿವರ್ಸಲ್ ಕಾರ್ಡ್ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದರು.
ವಿವಿಧ ಬೇಡಿಕೆ ಸಲ್ಲಿಕೆ
ಜಿಲ್ಲೆಯ ವಿವಿಧ ಕಾರ್ಮಿಕ ಸಂಟನೆಗಳು ತಮ್ಮ ಬೇಡಿಕೆಗಳ ಪಟ್ಟಿ ಸಲ್ಲಿಸಿದ್ದಾರೆ. ಕಟ್ಟಡ ಕಾರ್ಮಿಕ ಪೆನ್ಶನ್ ವಯಸ್ಸು ಹೆಚ್ಚಳ, ನಕಲಿ ಗುರುತು ಪತ್ರ ತೆಗೆಯಲು ಹಾಗೂ ಟೈಲರ್ಸ್ ವೆಲ್ಫೇರ್ ಂಡ್ ರಚಿಸಲು ಮನವಿ ನೀಡಿದ್ದಾರೆ ಎಂದರು.
9 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
ಹಿಂದಿನ ಸರ್ಕಾರ 13 ಸಾವಿರ ಕೋಟಿ ರೂ. ಇದ್ದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಹಣವನ್ನು 6.5 ಸಾವಿರ ಕೋಟಿ ರೂ.ಗೆ ಇಳಿಕೆ ಮಾಡಿದೆ. 39 ಲಕ್ಷ ಕಾರ್ಡ್ಗಳಿಗೆ ಬೇಕಾಬಿಟ್ಟಿ ಹಣ ಬಿಡುಗಡೆ ಮಾಡಿದೆ. ಈ ಬಗ್ಗೆ ನಮ್ಮ ಸರ್ಕಾರ ಪರಿಶೀಲನೆ ನಡೆಸುತ್ತಿದ್ದು, ನಕಲಿ ಕಾರ್ಡಗಳನ್ನು ತೆಗೆದುಹಾಕಲಾಗುವುದು. ಈ ವರ್ಷ ವಿದ್ಯಾರ್ಥಿ ವೇತನಕ್ಕೆ 13 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, 9 ಲಕ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಿಡುಗಡೆಯಾಗಿದೆ ಎಂದರು.
ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಕಾರ್ಮಿಕ ಆಯುಕ್ತ ಜಿ.ಮಂಜುನಾಥ್, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಸಿಇಒ ಭಾರತಿ ಉಪಸ್ಥಿತರಿದ್ದರು.