ಕವಿತಾಳದಲ್ಲಿ ರಾಯಚೂರು ಪತ್ತಿನ ಸಹಕಾರಿ ಸಂಘದ ಕಾರ್ಯಾಲಯವನ್ನು ಸಚಿವ ಎನ್.ಎಸ್ ಬೋಸರಾಜು ಉದ್ಘಾಟಿಸಿದರು. ಶಾಸಕ ಹಂಪಯ್ಯ ನಾಯಕ, ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಮಠ, ಗುತ್ತಿಗೆದಾರ ಬಲವಂತರಾಯಗೌಡ ವಟಗಲ್, ಶರಣಬಸವ ಹಣಗಿ ಇತರರಿದ್ದರು. 
ಜಿಲ್ಲೆ

ಸಾಮಾಜಿಕ ಕ್ಷೇತ್ರಕ್ಕೆ ಸಹಕಾರಿ ಕೊಡುಗೆ ಅಪಾರ

ಕವಿತಾಳ: ಜನರ ಆರ್ಥಿಕ ಅಭಿವೃದ್ಧಿಗೆ ಸಹಕಾರಿ ಪತ್ತಿನ ಸಂಘಗಳು ಸಹಕಾರಿಯಾಗಿವೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು.

ಪಟ್ಟಣದ ರಾಯಚೂರು ಸೌಹಾರ್ದ ಪತ್ತಿನ ಸಹಕಾರಿ ಸಂಘದ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.

ಸಹಕಾರಿ ಸಂಘಗಳು ಸಾಮಾಜಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ. ಸಣ್ಣ ಪುಟ್ಟ ವ್ಯಾಪಾರಸ್ಥರು ಅಭಿವೃದ್ಧಿ ಹೊಂದಲು ಸುಲಭವಾಗಿ ಸಾಲ ಸೌಲಭ್ಯ ನೀಡುತ್ತಿವೆ ಎಂದರು.

ಅಧ್ಯಕ್ಷ ವಿಶ್ವನಾಥ ಹಿರೇಮಠ ಮಾತನಾಡಿ, ಪತ್ತಿನ ಸಹಕಾರಿ ಸಂಘ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು.

ಇನ್ಮುಂದೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ ಎಂದರು. ಕಲ್ಮಠದ ಸಿದ್ಧಲಿಂಗಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಎಸ್‌ಎಸ್‌ಎನ್ ಅಧ್ಯಕ್ಷ ಯಮನಪ್ಪ ದಿನ್ನಿ, ತಿಪ್ಪಯ್ಯಸ್ವಾಮಿ, ಶರಣಬಸವ ಹಣಗಿ, ಚನ್ನಯ್ಯಸ್ವಾಮಿ, ರಾಜಶೇಖರ ಹಿರೇಮಠ, ಶಿವಕುಮಾರ ವಟಗಲ್, ಪಿಎಸ್‌ಐ ಗುರುಚಂದ್ರ ಯಾದವ, ಹನುಮಂತ ಹರಕೇರಿ ಇತರರಿದ್ದರು.