oplus_0 
ಜಿಲ್ಲೆ

ಅವಶ್ಯವಿರುವೆಡೆ ತಲುಪದ ಸಾಮಾಜಿಕ ಸೇವೆ

ಕೋಲಾರ ಡೆಸ್ಕ್

ಮುಳಬಾಗಿಲು: ನೆರವನ್ನು ನೀಡುವ ದಾನಿಗಳು ಇದ್ದರೂ ಅದನ್ನು ಸದುಪಯೋಗ ಮಾಡಿಕೊಳ್ಳುವ ಸಂಖ್ಯೆ ಕಡಿಮೆ ಇರುವುದರಿಂದ ಅವಶ್ಯ ಇರುವ ಕಡೆ ಸಾಮಾಜಿಕ ಸೇವೆಗಳು ತಲುಪುತ್ತಿಲ್ಲ. ಆದುದರಿಂದ ರೋಟರಿ ಪದಾಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೊನ್ನಶೆಟ್ಟಹಳ್ಳಿ ಗ್ರಾಮ ವಿಕಾಸ ಸಂಸ್ಥೆಯ ನಿರ್ದೇಶಕ, ಉಪ ರೋಟರಿ ಪಾಲಕ ಎಂ.ವಿ.ಎನ್​.ರಾವ್​ ತಿಳಿಸಿದರು.

ನಗರದ ಮುತ್ಯಾಲಪೇಟೆಯಲ್ಲಿ ರೋಟರಿ ಸೆಂಟ್ರಲ್​ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೋಟರಿ ಡಿಜಿಎನ್​ ಹರಿಣಿ ರವೀಂದ್ರನಾಥ್​ ಮಾತನಾಡಿ, ರೋಟರಿ ಸಂಪರ್ಕ ಸಮಾಜ ಮತ್ತು ಸಾಮಾನ್ಯ ಜನರೊಂದಿಗೆ ಇರಬೇಕು. ಈ ನಿಟ್ಟಿನಲ್ಲಿ ಮುಳಬಾಗಿಲು ರೋಟರಿ ಒಳ್ಳೆ ಪ್ರಗತಿ ಸಾಧಿಸಿದೆ, ನಾಯಕತ್ವ, ದಿಟ್ಟತನದೊಂದಿಗೆ ಸಮಾಜದ ಅಭಿವೃದ್ಧಿಗೆ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಇನ್ನೂ ಹೆಚ್ಚಿನ ಸೇವೆಗಳು ಹೆಜ್ಜೆಗಳಾಗಬೇಕು ಜತೆಗೆ ಮಹಿಳೆಯರು ಪಾಲ್ಗೊಳ್ಳುವಂತೆ ಆದ್ಯತೆ ನೀಡಬೇಕು ಎಂದರು.

ಜಿಲ್ಲಾ ಕಾರ್ಯದರ್ಶಿ ಎನ್​.ರವೀಂದ್ರನಾಥ್​ ಮಾತನಾಡಿ, ರೋಟರಿ ಮುಳಬಾಗಿಲು ಸೆಂಟ್ರಲ್​ ಕಾರ್ಯಕ್ರಮಗಳ ಮೂಲಕ ರಾಜ್ಯದಲ್ಲಿ ಮುಂಚೂಣಿ ಸ್ಥಾನ ಪಡೆದಿದೆ ರೈತರಿಗೆ ತೆಂಗಿನ ಸಸಿ ವಿತರಣೆ, ಸಸಿ ನೆಡುವ ಕಾರ್ಯಕ್ರಮಗಳು, ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಸೇವೆಗಳು, ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಲೇಖನಿ ಸಾಮಗ್ರಿಗಳ ವಿತರಣೆ ಸೇರಿ ಹಲವಾರು ಜನಪರ ಕಾರ್ಯಕ್ರಮಗಳು ದಾನಿಗಳ ನೆರವಿನಿಂದ ಮಾಡಲಾಗಿದೆ ಎಂದರು.

ನಿಕಟ ಪೂರ್ವ ಅಧ್ಯಕ್ಷ ನಗವಾರ ಎನ್​.ಆರ್​.ಸತ್ಯಣ್ಣ, ರೋಟರಿ ವಲಯ ಚೇರ್ಮನ್​ ಡಾ.ಸಿ.ಎ. ಮುರಳೀಧರ್​, ನೂತನ ಕಾರ್ಯದರ್ಶಿ ರಾುನಾಥಯ್ಯ, ಉಪಾಧ್ಯಕ್ಷ ಕಾರ್​ ಶಂಕರ್​, ಜಂಟಿ ಕಾರ್ಯದರ್ಶಿ ಎಸ್​. ಉಮಾ, ಖಜಾಂಚಿ ಪಿ.ಎಸ್​.ರಮೇಶ್​, ಮಹಿಳಾ ಸಬಲೀಕರಣ ಮುಖ್ಯಸ್ಥೆ ಸರಿತಾ ಬಾಲಾಜಿ, ಅಂತಾರಾಷ್ಟ್ರೀಯ ಸೇವಾ ನಿರ್ದೇಶಕ ಉತ್ತನೂರು ಆರ್​.ಅರುಣ್​ ಕುಮಾರ್​, ಸುದರ್ಶನ್​ ಬಾಬು, ಎಸ್​. ಎನ್​. ರಾಮಕೃಷ್ಣ, ಎನ್​. ಎಂ. ರಾಘವೇಂದ್ರ, ಬಲ್ಲಂ ಶ್ರೀನಿವಾಸ್​ , ಗೊಲ್ಲಹಳ್ಳಿ ಪ್ರಭಾಕರ್​ ಇದ್ದರು.