ಜಿಲ್ಲೆ

ಸಂಘಟಿತರಾಗಿ ಸಮಾಜದ ಸೇವೆ ಮಾಡಿ

ಮುದಗಲ್: ಪ್ರತಿಯೊಬ್ಬರೂ ಒಗ್ಗಟ್ಟಾಗಿ ಶ್ರಮಿಸಿದಾಗಿ ಬಣಜಿಗ ಸಮಾಜದ ಏಳಿಗೆ ಸಾಧ್ಯ ಎಂದು ಸಮುದಾಯದ ಪ್ರಮುಖ ಡಾ.ಶಿವಬಸ್ಸಪ್ಪ ಹೆಸರೂರು ಹೇಳಿದರು.

ಪಟ್ಟಣದ ಶ್ರೀ ವಿಜಯ ಮಹಾಂತೇಶ್ವರ ಮಠದ ಸಭಾಂಗಣದಲ್ಲಿ ಬಣಜಿಗ ಸಮುದಾಯದ ಸಭೆಯಲ್ಲಿ ಸೋಮವಾರ ಮಾತನಾಡಿದರು. ಸಮಾಜದ ಎಲ್ಲ ರಂಗಗಳಲ್ಲಿ ನಮ್ಮ ಸಮುದಾಯದವರು ಸಂಘಟಿತರಾಗಿ ಸೇವೆಗೆ ಅಣಿಯಾಗಬೇಕು. ಶೈಕ್ಷಣಿಕ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕು. ಸಂಘಟಿತ ಸಮಾಜದ ನಿರ್ಮಾಣ ನಮ್ಮೆಲ್ಲರ ಕೈಯಲ್ಲಿದ್ದು, ಎಲ್ಲರೂ ಬಸವಾದಿ ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕು ಸಾಗಿಸಬೇಕೆಂದರು.

ಪಟ್ಟಣದ ಬಣಜಿಗ ಸಮಾಜಕ್ಕೆ ಮಲ್ಲಪ್ಪ ಮಾಟೂರು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಪುರಸಭೆ ಸದಸ್ಯ ಗುಂಡಪ್ಪ ಗಂಗಾವತಿ ಇತರರಿದ್ದರು.