ಸಾಗರ : ಸಮಾಜದ ಸಾಮರ್ಥ್ಯ ಹೆಚ್ಚಿಸುವಲ್ಲಿ ಶರಣರು, ದಾರ್ಶನಿಕರು, ಸಂತರು ನೀಡಿದ ಕೊಡುಗೆ ದೊಡ್ಡದು ಎಂದು ಉಪ ತಹಸೀಲ್ದಾರ್ ಕಲ್ಲಪ್ಪ ಮೆಣಸಿನಾಳ್ ಹೇಳಿದರು.
ನಗರದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದಾರ್ಶನಿಕರ ತತ್ವಾದರ್ಶ ಪಾಲಿಸುವುದರಿಂದ ಸಮಾಜ ಸುಧಾರಿಸಲು ಸಾಧ್ಯ. ಮನುಷ್ಯರ ನಡುವಿನ ಕಂದಕ ನಿವಾರಣೆಗಾಗಿ ನಾವು ಸಹೋದರತ್ವ ಮತ್ತು ಸೌಹಾರ್ದದ ಕಡೆ ಹೆಜ್ಜೆ ಹಾಕುವುದು ಅನಿವಾರ್ಯ. ವಿಶ್ವಕರ್ಮರು ತಮ್ಮ ಅದ್ವಿತೀಯ ಕಲಾವಂತಿಕೆ ಮೂಲಕ ನಾಡಿನೆ¯್ಲೆಡೆ ಛಾಪು ಮೂಡಿಸಿz್ದÁರೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಬೆಳ್ವೆ ಕೇಶವಾಚಾರ್ಯ, ಜಗತ್ತಿನ ಸರ್ವಶ್ರೇಷ್ಠ ದಾರ್ಶನಿಕರಲ್ಲಿ ವಿಶ್ವಕರ್ಮರು ಒಬ್ಬರು. ಸಮಾಜ ಸುಧಾರಣೆಗೆ ತಮ್ಮದೆ ಕೊಡುಗೆ ನೀಡಿರುವ ವಿಶ್ವಕರ್ಮರು ನಡೆದು ಬಂದ ಹಾದಿಯನ್ನು ಅನುಸರಿಸುವ ಮೂಲಕ ಮಾನವೀಯ ಮೌಲ್ಯ ಪ್ರತಿಷ್ಠಾಪಿಸಬೇಕು. ವಿಶ್ವಕರ್ಮ ಸಮುದಾಯ ವಾಸ್ತುಶಿಲ್ಪಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ವಿಶ್ವಕರ್ಮರು ಸಮುದಾಯಕ್ಕೆ ನೀಡಿದ ಮಹತ್ತರ ಕೊಡುಗೆಯಲ್ಲಿ ವಾಸ್ತುಶಿಲ್ಪ ಪ್ರಮುಖವಾದದ್ದು ಎಂದು ಹೇಳಿದರು.
ವಿಶ್ವಕರ್ಮ ಸಮಾಜದ ಅಧ್ಯಕ್ಷ ಮಂಜುನಾಥ ಆಚಾರ್ಯ, ಶಿಶು ಅಭಿವೃದ್ಧಿ ಯೋಜನಾಽಕಾರಿ ಸಂತೋಷಕುಮಾರ್, ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಮೋಹನ್ ಇತರರಿದ್ದರು.