ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಇಳಕಲ್ಲ ಘಟಕ ವತಿಯಿಂದ ಹಮ್ಮಿಕೊಂಡ ಸಮಾರಂಭದಲ್ಲಿ ಡಾ. ಪ್ರಕಾಶ ತಾರಿವಾಳ, ಚಂದ್ರಶೇಖರ ಚಟ್ಟೇರ್, ಅಮರೇಶ ಐಹೊಳ್ಳಿ, ಈರಪ್ಪ ಗೋನಾಳ, ಅಮರೇಶ ನೀರಲಕೇರಿ, ಪರಪ್ಪ ಕಟಗೇರಿ, ರವಿ ಅಂಗಡಿ ಅವರನ್ನು ಸತ್ಕರಿಸಲಾಯಿತು. ಸಿ.ಸಿ. ಚಂದ್ರಾಪಟ್ಟಣ, ಮುರುಗೇಶ ಪಾಟೀಲ, ಗಂಗಾಧರ ಶೆಟ್ಟರ ಇದ್ದರು.  
ಜಿಲ್ಲೆ

ಸಮಾಜ ಸಂಘಟನೆಗೆ ಎಲ್ಲರ ಸಹಕಾರ ಅಗತ್ಯ

Bagalkot

ಇಳಕಲ್ಲ(ಗ್ರಾ): ಸುಸಂಸ್ಕೃತರು ಎಂದು ಹೆಸರು ಪಡೆದ ಬಣಜಿಗರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು. ಜತೆಗೆ ಅನ್ಯ ಸಮಾಜಗಳ ಅಭಿವೃದ್ಧಿಗೂ ಕೈಜೋಡಿಸಬೇಕು ಎಂದು ಬಾಗಲಕೋಟೆ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸಿ.ಸಿ. ಚಂದ್ರಾಪಟ್ಟಣ ಹೇಳಿದರು.

ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಇಳಕಲ್ಲ ನಗರ ಘಟಕ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರ ಹಾಗೂ ಸೇವಾ ನಿವತ್ತರ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜವನ್ನು ಸಂಘಟಿಸಿ ಆರ್ಥಿಕವಾಗಿ ಸದೃಢವನ್ನಾಗಿ ಮಾಡಲು ಎಲ್ಲರ ಸಹಾಯ-ಸಹಕಾರ ಅವಶ್ಯವೆಂದು ಅಭಿಪ್ರಾಯ ವ್ಯಕ್ತ ಪಡಿಸಿದರು.

ಮುರುಗೇಶ ಪಾಟೀಲ ಮಾತನಾಡಿ, ನಮ್ಮ ಸೇವೆ ಗುರುತಿಸಿ ಗೌರವಿಸಿದ್ದು ಸಂತೋಷದ ಘಳಿಗೆ. ಸಮಾಜ ಸೇವೆಯಲ್ಲಿ ತೊಡಗಿದರೆ ನಾವು ಚೈತನ್ಯದಿಂದ ಇರುತ್ತೇವೆ. ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು.

ಮೈಸೂರು ಮುಕ್ತ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಪ್ರಕಾಶ ತಾರಿವಾಳ, ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ಸಂಘದ ಹುನಗುಂದ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಚಟ್ಟೇರ್, ಅಮರೇಶ ಐಹೊಳ್ಳಿ, ಈರಪ್ಪ ಗೋನಾಳ, ಅಮರೇಶ ನೀರಲಕೇರಿ, ಪರಪ್ಪ ಕಟಗೇರಿ, ರವಿ ಅಂಗಡಿ ಅವರನ್ನು ಗೌರವಿಸಿ ಸತ್ಕರಿಸಲಾಯಿತು.

ಶರಣಪ್ಪ ಲೋಕಾಪೂರ, ಇಂಜಿನಿಯರ್ ಮಹಾಂತಪ್ಪ ವಾಲಿ,ಆದಪ್ಪ ಮೇರನಾಳ, ಡಾ.ಬಸವರಾಜ ಅಂಗಡಿ ಮಾತನಾಡಿದರು. ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನಗರ ಘಟಕದ ಅಧ್ಯಕ್ಷ ಗಂಗಾಧರ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿರೇಶ ಜೀರಗಿ ಸಂಘದ ಕಾರ್ಯ ಚಟುವಟಿಕೆ ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ವಿ.ಎಸ್.ಅಂಗಡಿ, ಖಜಾಂಚಿ ಮಹಾಬಳೇಶ್ವರ ಮರಟದ, ಹಿರಿಯರಾದ ಮಹಾಂತೇಶ ಅರಳಿ, ಪರುತಪ್ಪಗೌಡ ಪಟ್ಟಣಶೆಟ್ಟಿ, ಪರಪ್ಪ ಕವಲಿ, ಗಣೇಶ ಗದ್ದಿ, ಬಸವರಾಜ ಚಳಗೇರಿ, ಬಸವರಾಜ ಗುಗ್ಗರಿ, ರಾಜು ಚಿನಿವಾಲರ, ಮಲ್ಲಪ್ಪ ಅಂಗಡಿ, ಅಶೋಕ ಸಂಕನೂರ, ಶ್ರೀಧರ ಕವಲಿ, ಮಂಜುನಾಥ ತೊಂತನಾಳ, ಚಂದ್ರಶೇಖರ ಜಾಲಿಹಾಳ, ಚನ್ನಬಸು ನೀರಲಕೇರಿ ಇದ್ದರು. ಮಂಜುನಾಥ ಅಂಗಡಿ ಸ್ವಾಗತಿಸಿದರು. ಚನ್ನಬಸವ ಲೆಕ್ಕಿಹಾಳ ನಿರೂಪಿಸಿದರು. ವಿನಯ ಅಂಗಡಿ ವಂದಿಸಿದರು.