ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಯುವವಾಹಿನಿ ಸಂಚಲನ ಸಮಿತಿ ಉಜಿರೆ ಆಶ್ರಯದಲ್ಲಿ ಬಿಲ್ಲವ ಸಮಾಜದವರಿಗೆ ಓವರ್ ಆರ್ಮ್ ಲೀಗ್ ಮಾದರಿಯ 8 ತಂಡಗಳ ಬಿಡ್ಡಿಂಗ್ ಕ್ರಿಕೆಟ್ ಪಂದ್ಯಾಟ ಗುರುನಾರಾಯಣ ಟ್ರೋಫಿ-2025 ಶನಿವಾರ ಉಜಿರೆ ಅಜ್ಜರಕಲ್ಲು ಮೈದಾನದಲ್ಲಿ ನಡೆಯಿತು. ಉಜಿರೆ ಶ್ರೀ ಗುರುನಾರಾಯಣ ಸ್ವಾಮಿಸೇವಾ ಸಂಘದ ಮಾಜಿ ಅಧ್ಯಕ್ಷ ಎಂ. ಬಿ. ಜಯಶಂಕರ್ ಉದ್ಘಾಟಿಸಿದರು.
ಉಜಿರೆ ಗುರು ಭವನ ನಿರ್ಮಾಣ ಸಮಿತಿ ಅಧ್ಯಕ್ಷ, ಉಜಿರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿಕುಮಾರ್ ಬರೆಮೇಲು ಮಾತನಾಡಿ, ಈ ಕ್ರೀಡಾಕೂಟ ಸಮಾಜದವರ ಸಂಘಟನೆಗಾಗಿ ಆಯೋಜನೆ ಮಾಡಲಾಗಿದ್ದು, ಉಜಿರೆ ಸಂಘದ ವತಿಯಿಂದ ಗುರು ಮಂದಿರ ನಿರ್ಮಾಣಕ್ಕೆ ಸಚಿನ್ 30 ಸೆಂಟ್ಸ್ ಜಾಗ ಕೊಡುಗೆ ನೀಡಿದ್ದಾರೆ. ಗುರು ಮಂದಿರ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ನಾರಾಯಣ ಸುವರ್ಣ ಬೆಳಾಲು ಮಾತನಾಡಿದರು. ಉಜಿರೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಬರೆಮೇಲು, ನಿವೃತ್ತ ಶಿಕ್ಷಕ ಕೃಷ್ಣಪ್ಪ ಪೂಜಾರಿ, ಧರ್ಮಸ್ಥಳ ಇಂಚರ ಮೊಬೈಲ್‌ನ ಸಚಿನ್, ಪತ್ರಕರ್ತ ಜಾರಪ್ಪ ಪೂಜಾರಿ ಬೆಳಾಲು, ಉಜಿರೆ ಯುವವಾಹಿನಿ ಅಧ್ಯಕ್ಷ ರಿತೇಶ್ ರೆಂಜಾಳ, ಕಡಿರುದ್ಯಾವರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್, ಉಜಿರೆ ರತ್ನಮಾನಸದ ರವಿಚಂದ್ರ, ಸದಾಶಿವ ಕೊಕ್ರಾಡಿ, ಉಜಿರೆ ಗ್ರಾಮ ಪಂಚಾಯಿತಿ ಸದಸ್ಯ ಗುರುಪ್ರಸಾದ್ ಕೋಟ್ಯಾನ್, ಬೆಂಗಳೂರು ವಿವಾ ಟೊಯೋಟಾ ಸಂಸ್ಥೆಯ ಸರ್ವೀಸ್ ಮ್ಯಾನೇಜರ್ ಗಣೇಶ್, 8 ತಂಡಗಳ ಮಾಲೀಕರಾದ ಡಿಜೆ ಬ್ರದರ್ಸ್ ಪುದುವೆಟ್ಟು ರಂಜನ್ ಬಿರ್ವ, ಮಹೇಶ್, ಕನ್ಯಾಡಿ ಫ್ರೆಂಡ್ಸ್ ನವೀನ್ ಸುವರ್ಣ, ಅಯ್ಯನ್ ಪೂಜಾರಿ ಕಾಶಿಪಟ್ನ ಪ್ರದೀಪ್ ಕಾಶಿಪಟ್ನ, ಅರ್ವಿ ದೇಸಿನಕೋಡಿ ರವಿ ದೇಸಿನ ಕೋಡಿ, ಚಾಮುಂಡೇಶ್ವರಿ ಆರಿಕೋಡಿ ದಯಾನಂದ ಪಿ. ಬೆಳಾಲು, ಡಾ.ಚೇತನ್, ಫೆಂಟೆಂನ್ಸಿ ಕ್ರಿಕೆಟರ್ಸ್ ಅನಿಲ್, ಪೆರ್ಲ ಕಿಶೋರ್ ಪೆರ್ಲ, ಫ್ರೆಂಡ್ಸ್ ಮೈರೋಳ್ತಡ್ಕ ರಾಜೇಶ್, ನವೀನ್ ಉಪಸ್ಥಿತರಿದ್ದರು.
ಉಜಿರೆ ಯುವವಾಹಿನಿ ಸಂಚಲನ ಸಮಿತಿಯ ಕ್ರೀಡಾ ಸಂಚಾಲಕ ದೇವಿ ಪ್ರಸಾದ್ ಬರೆಮೇಲು, ಕಾರ್ಯದರ್ಶಿ ಉದಯ ಮಾಚಾರು, ಸಮಿತಿ ಸದಸ್ಯರು ಹಾಜರಿದ್ದು ಸಹಕರಿಸಿದರು. ಬಳಿಕ ಕ್ರಿಕೆಟ್ ಪಂದ್ಯಾಟ ನಡೆಯಿತು. ಪ್ರಸಾದ್ ಕಾಶಿಪಟ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.