ಜಿಲ್ಲೆ

ನಾಟಕಗಳಿಂದ ಸಾಮಾಜಿಕ ಸಂದೇಶ

ಉತ್ತರ ಕನ್ನಡ ಡೆಸ್ಕ್

ಗಜೇಂದ್ರಗಡ: ಸಮಾಜದಲ್ಲಿ ನಡೆಯುವ ಘಟನೆ, ಸಮಸ್ಯೆಗಳು ಸೇರಿ ಹಲವಾರು ಪ್ರಚಲಿತ ವಿದ್ಯಮಾನಗಳ ಕುರಿತ ನಾಟಕಗಳು ಜನರಿಗೆ ಅರ್ಥಪೂರ್ಣವಾದ ಸಾಮಾಜಿಕ ಸಂದೇಶಗಳನ್ನು ನೀಡುತ್ತವೆ ಎಂದು ರೋಣ ಪುರಸಭೆ ಸದಸ್ಯ ಮಿಥುನ ಜಿ. ಪಾಟೀಲ ಹೇಳಿದರು.

ತಾಲೂಕಿನ ಗೋಗೇರಿ ಗ್ರಾಮದಲ್ಲಿ ಗೆಳೆಯರ ಬಳಗದಿಂದ ಆಯೋಜಿಸಿದ್ದ ನಿರ್ದಿಗಂತ ತಂಡದಿಂದ ಪ್ರಸ್ತುತಪಡಿಸಿದ ‘ತಿಂಡಿಗೆ ಬಂದ ತುಂಡೇರಾಯ’ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲಾತ್ಮಕ ನಾಟಕಗಳು ಜನರಿಗೆ ಹಲವಾರು ವಿಷಯಗಳ ಕುರಿತು ಮನವರಿಕೆ ಮಾಡಿ ತಿಳಿವಳಿಕೆ ಮೂಡಿಸುತ್ತವೆ. ಮನರಂಜನೆಯ ಜತೆಗೆ ರಂಗಭೂಮಿ ಉಳಿಸುವ ಕೆಲಸ ಮಾಡುತ್ತದೆ. ಈ ನಾಟಕವು ಜರ್ಮನ್ ನಾಟಕಕಾರ ಬಟೋಲ್ಡ್ ಬ್ರೆಕ್ಟ್​ನ ನಾಟಕವನ್ನು ಆಧರಿಸಿದೆ ಎಂದರು.

ಶಿಕ್ಷಕ ಆರ್.ಕೆ. ಬಾಗವಾನ ಮಾತನಾಡಿ, ನಾಟಕವೆಂದರೆ ಸಂಭಾಷಣೆಯನ್ನು ಕಂಠಪಾಠ ಮಾಡಿಸಿ ಕಟ್ಟುವುದಲ್ಲ. ತರಬೇತಿಯಲ್ಲಿ ಕಲಾವಿದರು ಅಭಿವ್ಯಕ್ತಿಸಿದ ಪರಿಣಾಮ ನಾಟಕವಾಗಿದೆ ಎಂದರು.

ನ್ಯಾಯವಾದಿ ಕೆ.ಎಸ್. ಕೊಡತಗೇರಿ, ಬಸವರಾಜ ಮೂಲಿಮನಿ ಮಾತನಾಡಿದರು. ಕಳಕಯ್ಯ ಹಿರೇಮಠ, ಹೇಮಾಪತಿ ಭೋಸಲೆ, ಹನಮಪ್ಪ ಹೋರಪೇಟಿ, ಇಮಾಮಸಾಬ ಬಾಗವಾನ, ಕಳಕಪ್ಪ ಅಡವಿ, ಕಟ್ಟೆಪ್ಪ ಮಾದರ, ಮಲ್ಲಿಕಾರ್ಜುನ ಗಾರಗಿ, ಬಸವರಾಜ ಶೀಲವಂತರ, ಕೆ.ಕೆ. ಬಾಗವಾನ, ಹನಮಪ್ಪ ಮಾದರ, ಮುತ್ತಪ್ಪ ಲ್ಯಾವಕ್ಕಿ, ಎಫ್.ಡಿ. ಕಟ್ಟಿಮನಿ, ಪರಶುರಾಮ ಹೊರಪೇಟಿ, ಮಂಜು ಭೋಸಲೆ ಇತರರು ಇದ್ದರು.