ಕುಶಾಲನಗರ ತಾಲೂಕು ಗುಡ್ಡೆಹೊಸೂರು ಗ್ರಾಮ ಪಂಚಾಯತಿ ೨೦೨೨-೨೩ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ ದೊಡ್ಡಬೇಟಗೆರಿ ಗ್ರಾಮದ ಸಮುದಾಯ ಭವನದಲ್ಲಿ ಶುಕ್ರವಾರ ನಡೆಯಿತು. ಜಿಲ್ಲಾ ಒಂಬುಡ್ಸ್‌ಮನ್ ಮಹದೇವಸ್ವಾಮಿ ಸಭೆಯಲ್ಲಿ ಇದ್ದರು. ತಾಲೂಕು ನೋಡಲ್ ಅಧಿಕಾರಿ ದಿನೇಶ್ ಸಾಮಾಜಿಕ ಪರಿಶೋಧನಾ ವರದಿ ಮಂಡಿಸಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಮೇಶ್, ಕಾರ್ಯದರ್ಶಿ ಕುಮಾರ ಸ್ವಾಮಿ ಇದ್ದರು.