ಜಿಲ್ಲೆ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯಾದ್ಯಂತ ಸೋಮವಾರದಿಂದ ಆರಂಭಿಸಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಜಿಲ್ಲೆಯಲ್ಲೂ ಚಾಲನೆ ನೀಡಲಾಗಿದೆ. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಅವಳಿನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ಪರಿಶೀಲಿಸಿದರು.

ನಗರದ ಪೆಂಡಾರ ಗಲ್ಲಿ, ತಡಕೋಡ ಓಣಿ ಪ್ರದೇಶಗಳಲ್ಲಿ ಸಂಚರಿಸಿ, ಸಮೀಕ್ಷಕರಿಂದ ಮಾಹಿತಿ ಪಡೆದು ಕೆಲ ಸೂಚನೆಗಳನ್ನು ನೀಡಿದರು. ಪೆಂಡಾರ ಗಲ್ಲಿಯ ರೇಣುಕಾ ಬೊಮ್ಮಣ್ಣವರ ಕುಟುಂಬದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ, ಮುಖ್ಯಸ್ಥೆ ರೇಣುಕಾ ಅವರಿಂದ ಸಮೀಕ್ಷಾ ಪ್ರಶ್ನಾವಳಿ ಕುರಿತು ಮಾಹಿತಿ ಪಡೆದರು. ಸಮೀಕ್ಷೆಯ ಉಪಯುಕ್ತತೆಯನ್ನು ವಿವರಿಸಿದರು.

ಹಿಂದುಳಿದ ವರ್ಗಗಳ ಜಿಲ್ಲಾ ಅಽಕಾರಿ ಭಾನುಮತಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ತಾಲೂಕು ವಿಸ್ತರಣಾ ಅಧಿಕಾರಿ ಸಂಜೀವ ಕೇಸರಿ, ಬ್ಲಾಕ್ ಮೇಲ್ವಿಚಾರಕರು, ನಿಲಯಪಾಲಕರು, ಸಮೀಕ್ಷಕರು ಉಪಸ್ಥಿತರಿದ್ದರು.