ಜಿಲ್ಲೆ

ಕರಡಹಳ್ಳಿ ಗ್ರಾಪಂ ಸದಸ್ಯನ ಸದಸ್ಯತ್ವ ರದ್ದು: ಸಾಮಾಜಿಕ ಹೋರಾಟಗಾರ ರಾಮಣ್ಣ ಮಾಹಿತಿ

ಮಂಡ್ಯ: ಸಾರ್ವಜನಿಕರಿಗೆ ಅನುಕೂಲ ಹಾಗೂ ಮೂಲ ಸೌಕರ್ಯ ಕಲ್ಪಿಸುವ ಕೊಡದರ ಜತೆಗೆ ಅಧಿಕಾರ ದುರುಪಯೋಗಪಡಿಸಿಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಾಗಮಂಗಲ ತಾಲೂಕು ಕರಡಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕಲ್ಲಿನಾಥಪುರ ಸಿದ್ದಲಿಂಗಪ್ಪ ಅವರ ಸದಸ್ಯತ್ವ ರದ್ದುಗೊಳಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ ಎಂದು ದೂರುದಾರರೂ ಆದ ಸಾಮಾಜಿಕ ಹೋರಾಟಗಾರ ರಾಮಣ್ಣ ಹೇಳಿದರು.

ಸಿದ್ದಲಿಂಗಪ್ಪ ಅವರ ಪತ್ನಿ 2015 ರಿಂದ 2020ರವರೆಗೆ ಇದೇ ಗ್ರಾಪಂನಲ್ಲಿ ಸದಸ್ಯೆಯಾಗಿದ್ದರು. ಈ ಸಮಯದಲ್ಲಿ ವಿವಿಧ ಕಾಮಗಾರಿ ಗುತ್ತಿಗೆ ಪಡೆದು ಕಳಪೆ ಕೆಲಸ ಮಾಡಿದ್ದರು. ಇತರೆ ಗುತ್ತಿಗೆದಾರರನ್ನು ವಂಚಿಸಿ ಕೋಟ್ಯಂತರ ರೂ ವಂಚಿಸಿದ್ದರು. ಇದಾದ ಬಳಿಕ ಸಿದ್ದಲಿಂಗಪ್ಪ ಅವರೇ ಗ್ರಾಪಂ ಸದಸ್ಯರಾದರೂ ಸಾರ್ವಜನಿಕರ ಕೆಲಸ ಮಾಡಿಕೊಡುತ್ತಿರಲಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಗಿರೀಶ್, ಭಗವಾನ್ ಚಕ್ರವರ್ತಿ, ಭಗತ್‌ಸಿಂಗ್ ಅರುಣ್ ಇದ್ದರು.