ಜಿಲ್ಲೆ

ಸ್ನೇಹಶ್ರೀ ರಂಗಪ್ರವೇಶ 21ರಂದು

ಶಿರಸಿ: ಭರತನಾಟ್ಯ ಕಲಾವಿದೆ ಸ್ನೇಹಶ್ರೀ ಹೆಗಡೆ ಅವರ ರಂಗಪ್ರವೇಶ ಕಾರ್ಯಕ್ರಮ ಅ.21ರಂದು ಸಂಜೆ 5.30ಕ್ಕೆ ನಗರದ ರಂಗಧಾಮದಲ್ಲಿ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಸಂಘಟಕಿ ಬಿಂದು ಹೆಗಡೆ, ಆರನೇ ವಯಸ್ಸಿನಿಂದಲೇ ಭರತನಾಟ್ಯ ಕಲಿಕೆಯಲ್ಲಿ ತೊಡಗಿಸಿಕೊಂಡ ಸ್ನೇಹಶ್ರೀ ಹೆಗಡೆ ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯನ್ನು ಪೂರೈಸಿದ್ದಾಳೆ. ಪ್ರಸ್ತುತ ವಿದ್ವತ್ ಅನ್ನು ಸೌಮ್ಯ ಪ್ರದೀಪ ಹೆಗಡೆ ಅವರಲ್ಲಿ ಅಭ್ಯಸಿಸುತ್ತಿದ್ದಾಳೆ. ರಂಗಪ್ರವೇಶ ಕಾರ್ಯಕ್ರಮವನ್ನು ಮೈತ್ರೇಯಿ ಕಲಾ ಟ್ರಸ್ಟ್ ನೇತೃತ್ವದಲ್ಲಿ ಸಂಘಟಿಸಲಾಗಿದೆ ಎಂದರು.

ಹಾಡುಗಾರಿಕೆಯಲ್ಲಿ ಶ್ರೀಕಾಂತ ಗೋಪಾಲಕೃಷ್ಣನ್, ನಟುವಾಂಗದಲ್ಲಿ ಸೌಮ್ಯಾ ಪ್ರದೀಪ ಹೆಗಡೆ, ವಯಲಿನ್‌ನಲ್ಲಿ ಮತ್ತೂರ ಶ್ರೀನಿಧಿ, ಮೃದಂಗ ತುಮಕೂರು ಬಿ. ಶಶಿಶಂಕರ, ಕೊಳಲಿನಲ್ಲಿ ಶಶಾಂಕ್ ಜೋಡಿದಾರ್ ಸಹಕರಿಸುವರು ಎಂದರು. ಕಲಾವಿದೆ ಸ್ನೇಹಶ್ರೀ ಹೆಗಡೆ, ಕಲಾಪೋಷಕ ಡಿ.ಜಿ.ಹೆಗಡೆ, ಇತರರು ಇದ್ದರು.