ಜಿಲ್ಲೆ

ಕೊರಳಲ್ಲಿ ಹಾವು ಸುತ್ತಿಕೊಂಡು ಊರೆಲ್ಲಾ ತಿರುಗಾಟ: ಬೆಳಗಾವಿಯಲ್ಲೊಬ್ಬ ಆಧುನಿಕ ‘ಈಶ್ವರ’

suchetana

ಬೆಳಗಾವಿ: ಜೀವಂತ ಹಾವನ್ನು ಹಿಡಿದು ತನ್ನ ಕೊರಳಿಗೆ ಸುತ್ತಿಕೊಂಡು ಸೈಕಲ್ ಮೇಲೆ ವ್ಯಕ್ತಿಯೊಬ್ಬ ಸುತ್ತಾಡಿದ ಘಟನೆ ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನಡೆದಿದೆ.

ಹಾವನ್ನು ಹಿಡಿದು ಅದನ್ನು ತನ್ನ ಕೊರಳಿಗೆ ಸುತ್ತಿಕೊಂಡು ಸೈಕಲ್ ಏರಿ ತನ್ನ ಹೊಲದತ್ತ ತೆಗೆದುಕೊಂಡು ಹೋಗಿ ಅರಣ್ಯಕ್ಕೆ ಬಿಟ್ಟಿದ್ದಾರೆ ಇವರು. ಈ ಹಾವು ಇವರ ಮನೆಗೆ ಬಂದಿತ್ತಂತೆ. ಅದನ್ನು ಹಿಡಿದು ಕೊರಳಿಗೆ ಸುತ್ತಿಕೊಂಡು ಹೋಗಿ ಬಿಟ್ಟು ಬಂದಿದ್ದಾರೆ!

ಈ ದೃಶ್ಯವನ್ನು ಸೆರೆಹಿಡಿದಿರುವ ಗ್ರಾಮಸ್ಥರು ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ಇದೀಗ ಭಾರಿ ವೈರಲ್‌ ಆಗಿದೆ. ಈ ವ್ಯಕ್ತಿಯನ್ನು ಆಧುನಿಕ ಈಶ್ವರ ಎಂದೇ ಹಲವರು ಕೊಂಡಾಡುತ್ತಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ: