ಯಳಂದೂರು ಸಮೀಪದ ಹೆಗ್ಗವಾಡಿಪುರ ಗ್ರಾಮದ ಎನ್ರಿಚ್ ಮಹದೇವಸ್ವಾಮಿ ಅವರ ಜಮೀನಿನಲ್ಲಿದ್ದ ಉಡವನ್ನು ಉರಗ ತಜ್ಞ ಸ್ನೇಕ್ ಮಹೇಶ್ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟರು. 
ಜಿಲ್ಲೆ

ನೀರಿನ ಟ್ಯಾಂಕ್‌ಗೆ ಬಿದ್ದಿದ್ದ ಉಡ ರಕ್ಷಿಸಿದ ಸ್ನೇಕ್ ಮಹೇಶ್

ಯಳಂದೂರು: ಸಮೀಪದ ಹೆಗ್ಗವಾಡಿಪುರ ಗ್ರಾಮದಲ್ಲಿ ನೀರಿನ ಟ್ಯಾಂಕ್ ಒಳಗೆ ಬಿದ್ದಿದ್ದ ಉಡವನ್ನು ಗುರುವಾರ ಉರಗ ಪ್ರೇಮಿ ಸ್ನೇಕ್ ಮಹೇಶ್ ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಗ್ರಾಮದ ಎನ್ರಿಚ್ ಮಹದೇವಸ್ವಾಮಿ ಅವರ ತೋಟದ ಮನೆ ಹತ್ತಿರ ದನಕರುಗಳಿಗೆ ನೀರು ಇಟ್ಟಿದ್ದ ಟ್ಯಾಂಕ್‌ನಲ್ಲಿ ಆಹಾರ ಅರಸಿ ಬಂದ ಉಡ ಬಿದ್ದಿದೆ. ಇದನ್ನು ಕಂಡ ಮಹದೇವಸ್ವಾಮಿ ಕೂಡಲೇ ಸ್ನೇಕ್ ಮಹೇಶ್ ಅವರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅವರು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.