ಜಿಲ್ಲೆ

ಹೋಂಡಾ ಆಕ್ಟೀವ್ ಒಳಗೆ ಸೇರಿದ್ದ ನಾಗರಹಾವು !

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಬಿಸಿಲಿನ ಧಗೆಗೆ ದ್ವಿಚಕ್ರವಾಹನ ಸೀಟ್ ಅಡಿ ಸೇರಿಕೊಂಡಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹಿಡಿಯಲಾಗಿದೆ.

ಶನಿವಾರ ರಾತ್ರಿ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಬಳಿಯ ಮಾಯರಂಗಯ್ಯ ಎಂಬುವರು ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಹೋಂಡಾ ಆಕ್ಟೀವಾ ಒಳಗೆ ನಾಗರಹಾವು ಸೇರಿಕೊಂಡಿತ್ತು. ತಕ್ಷಣ ಉರಗ ರಕ್ಷಕರಿಗೆ ಕರೆ ಮಾಡಿ ತಿಳಿಸಿದ್ದು ದಿಲೀಪ್ ಎಂಬುವರು ಸೀಟ್ ಅಡಿಯಲ್ಲಿ ಅವಿತು ಕುಳಿತಿದ್ದ ನಾಗರಹಾವನ್ನು ರಕ್ಷಿಸಿದ್ದಾರೆ. ಅರ್ಧಗಂಟೆಗು ಹೆಚ್ಚು ಕಾಲದ ಪ್ರಯತ್ನದ ಬಳಿಕ ಸುರಕ್ಷಿತವಾಗಿ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದ ದಿಲೀಪ್ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.