ಜಿಲ್ಲೆ

ಹಾವು ಕಚ್ಚಿ ಹೈಸ್ಕೂಲ್ ಉದ್ಯೋಗಿ ಸಾವು

Uttara Kannada - Subash Hegde

ಕಾರವಾರ: ಹಾವು ಕಚ್ಚಿ ಅಸ್ವಸ್ಥಳಾಗಿದ್ದ ಹೈಸ್ಕೂಲ್ ಉದ್ಯೋಗಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.
ಶಿರವಾಡದ ಕರ್ನಟಕ ಪಬ್ಲಿಕ್ ಸ್ಕೂಲ್ ನ ಡಿ ದರ್ಜೆಯ ನೌಕರಳಾಗಿದ್ದ ಆನಂದಿ ಕಾಣಕೋಣಕರ್ (46) ಮೃತಳು.
ಆಗಸ್ಟ್ 1 ರಂದು ಸಾಯಂಕಾಲ 4 ಗಂಟೆಯ ಹಿತ್ತಿಗೆ ಜನರೇಟರ್ ಕೊಠಡಿಯ ಸಮೀಪ ಅವರಿಗೆ ಹಾವು ಕಚ್ಚಿತ್ತು.

ಇದನ್ನೂ ಓದಿ: ಮಾಜಿ ಸಂಸದರ ಮಗನ ಖಾತೆಗೇ ಆನ್​ಲೈನ್​ ವಂಚಕರ ಕನ್ನ!
ಕ್ರಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.
ಕೆಲ ವರ್ಷಗಳ ಹಿಂದೆ ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಅವರ ಪತಿ ಮೃತರಾಗಿದ್ದರು. ಅವರ ಅನುಕಂಪದ ಆಧಾರದ ನೌಕರಿ ಆನಂದಿ ಅವರಿಗೆ ದೊರಕಿತ್ತು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.