ಜಿಲ್ಲೆ

ಹಾವು ಕಚ್ಚಿ ಬಾಲಕಿ ಸಾವು

Belagavi

ಕೊಕಟನೂರ: ಬಯಲು ಬಹಿರ್ದೆಸೆಗೆ ತೆರಳಿದ್ದ ಬಾಲಕಿಗೆ ಹಾವು ಕಚ್ಚಿದ ಪರಿಣಾಮ ಬಾಲಕಿ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.

ಅಥಣಿ ತಾಲೂಕಿನ ಕರ್ಲಟ್ಟಿ ಗ್ರಾಮದ ಪ್ರತೀಕ್ಷಾ ಬಸಪ್ಪ ನಾಯಕ ಮೃತ ಬಾಲಕಿ. ಬಾಲಕಿಯನ್ನು ಚಿಕಿತ್ಸೆಗಾಗಿ ಅಥಣಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.