ಜಿಲ್ಲೆ

ಮುನವಳ್ಳಿ: ಹಾವು ಕಚ್ಚಿ ರೈತ ಸಾವು

Belagavi

ಮುನವಳ್ಳಿ: ಶೇಂಗಾ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿ ರೈತ ಸಾವನ್ನಪ್ಪಿದ ಘಟನೆ ರಾಮದುರ್ಗ ತಾಲೂಕಿನ ಉಜ್ಜಿನಕೊಪ್ಪದಲ್ಲಿ ಶನಿವಾರ ಸಂಭವಿಸಿದೆ.

ಮಲ್ಲಿಕಾರ್ಜುನ ಗದಿಗೆಪ್ಪ ದ್ಯಾಮನಗೌಡ್ರ (50) ಮೃತ ರೈತ. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಕಟಕೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.