ಜಿಲ್ಲೆ

ಶ್ರೀಧರ್​ ಅಯ್ಯರ್​ 60ರ ಸಂಭ್ರಮ; ರಂಜಿಸಿದ 'ಭಾವ ಶ್ರಾವಣ' ಕಾರ್ಯಕ್ರಮ

ಬೆಂಗಳೂರು: ಸಂಗೀತ ಧಾಮ ವತಿಯಿಂದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಖ್ಯಾತ ಗಾಯಕ ಶ್ರೀಧರ್​ ಅಯ್ಯರ್​ 60ರ ಸಂಭ್ರಮ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸಂಗೀತ ಧಾಮ ಹಾಗೂ ರೋಟರಿ ವತಿಯಿಂದ ಶ್ರೀಧರ್​ ಅಯ್ಯರ್​ ಅವರನ್ನು ಸನ್ಮಾನಿಸಲಾಯಿತು. ಮೃತ್ಯುಂಜಯ ದೊಡ್ಡವಾಡ ಸಂಗೀತ ನಿರ್ದೇಶನದಲ್ಲಿ "ಭಾವ ಶ್ರಾವಣ' ಕಾರ್ಯಕ್ರಮ ನಡೆಯಿತು. ಸಂಗೀತ ಧಾಮ ಹಾಗೂ ಸೃಜನ ಸಂಗೀತ ಶಾಲೆ ವಿದ್ಯಾರ್ಥಿಗಳಿಂದ ಗೀತ ನೃತ್ಯ, ಸಮೂಹ ಗಾಯನ ಮೂಡಿಬಂತು.

ಹಿರಿಯ ಕವಿ ಬಿ.ಆರ್​.ಲಕ್ಷ$್ಮಣ್​ರಾವ್​, ಹಿರಿಯ ಸಾಹಿತಿ ನಾ.ದಾಮೋದರ ಶೆಟ್ಟಿ, ಅಂತಾರಾಷ್ಟ್ರೀಯ ತಬಲಾ ವಾದಕ ಡಾ.ಪಂಡಿತ್​ ಸತೀಶ್​ ಹಂಪಿಹೊಳಿ, ಕವಿ ಶೈಲೇಶ್​ ಪಟ್ಟವರ್ಧನ್​, ಪತ್ರಕರ್ತರಾದ ಜೆ.ಎಚ್​.ಅನಿಲ್​ ಕುಮಾರ್​, ಕೆ.ಎನ್​.ಜಯಸಿಂಹ ಇತರರಿದ್ದರು.