ಉಡುಪಿ: ಕನ್ನಡದ ಪುಸ್ತಕ ಸಂಸತಕ್ಕೆ ಅನುವಾದಗೊಳ್ಳುತ್ತಿರುವುದು ಶುಭ ಸಂಕೇತವಾಗಿದ್ದು, ಎಲ್ಲೆಡೆ ಸಂಸ್ಕೃತ ಗ್ರಂಥಗಳು ಇತರ ಭಾಷೆೆಗಳಿಗೆ ಅನುವಾದ ಗೊಳ್ಳುತ್ತಿದ್ದರೆ, ಕನ್ನಡದಿಂದ ಸಂಸ್ಕೃತಕ್ಕೆ ಭಾಷಾಂತರವಾಗುವುದು ಹೊಸ ಭರವಸೆ ಮೂಡಿಸುತ್ತಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಸೋಮವಾರ ರಾಜಾಂಗಣದಲ್ಲಿ ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕ ಸಂಸತ ಸಂಶೋಧನ ಕೇಂದ್ರದಿಂದ ಪ್ರಕಾಶಿತ ಜ್ಯೋತಿಷಸೋಪಾನಮ್ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಪರ್ಯಾಯ ಮಠದ ಕಿರಿಯ ಶ್ರೀ ಶ್ರೀ ಸುಶ್ರೀಂದ್ರತಿರ್ಥಶ್ರೀಪಾದರು ಉಪಸ್ಥಿತರಿದ್ದರು. ಪ್ರೊ. ಶಿವಪ್ರಸಾದತಂತ್ರಿ ಪುಸ್ತಕದ ಪರಿಚಯವನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗ್ರಂಥ ಬಿಡುಗಡೆಗೆ ಧನ ಸಹಾಯ ಮಾಡಿದ ಉದ್ಯಮಿ ಅತುಲ್ ಕುಡ್ವ ಇವರು ಮಾತನಾಡಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎಸ್.ಎಂ.ಎಸ್.ಪಿ.ಸಭೆಯ ಕಾರ್ಯದರ್ಶ ವಿದ್ವಾನ್ ಗೋಪಾಲಕೃಷ್ಣ್ಣ ಜೋಯಿಸ್, ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ, ಸಂಸತ ಕಾಲೇಜಿನ ಪ್ರಾಂಶುಪಾಲ ಪ್ರೊ.ಸತ್ಯನಾರಾಯಣ ಆಚಾರ್ಯ, ಜ್ಯೋತಿಷಿ ಮುರಳೀಧರತಂತ್ರಿ ಉಪಸ್ಥಿತರಿದ್ದರು. ಸಂಸ್ಕೃತಕಾಲೇಜಿನ ವಿದ್ಯಾರ್ಥಿಗಳಾದ ಗಜಾನನ ಭಟ್ಟ, ಆದಿತ್ಯ ಎ.ಎಸ್. ಮತ್ತು ವಿನಯ ಹೆಗಡೆ ವೇದಘೋಷಣಗೈದರು. ಕಾಲೇಜಿನ ಅಧ್ಯಾಪಕ ವಿದ್ವಾನ್ ಶ್ರೀನಿವಾಸ ತಂತ್ರಿ ವಂದಿಸಿದರು. ಡಾ. ರಾಧಾಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.