ಜಿಲ್ಲೆ

ಧನ್ಯಬಾಳನ್ನು ಬದುಕಿದ ಎಲ್.ಎನ್. ಕೂಡೂರು - ವಿಶ್ವೇಶ್ವರ ಭಟ್ ಉಂಡೆಮನೆ ಬಣ್ಣನೆ - ಸ್ಮೃತಿ ನಮನ

Mangaluru - Nishantha Narayana


ವಿಟ್ಲ: ಧನ್ಯಜೀವವಾಗಿ ಧನ್ಯಬಾಳನ್ನು ಬದುಕಿದ ಎಲ್.ಎನ್. ಕೂಡೂರು ಜೇಸೀಸ್ ಮೂಲಕ ದೇಶ ಮಟ್ಟಕ್ಕೆ ಬೆಳೆದಿದ್ದಾರೆ. ಇಂಗ್ಲಿಷ್ ಕಲಿಕೆ ಸವಾಲಾಗಿದ್ದ ದಿನದಲ್ಲಿ ಸಂಸ್ಥೆಗೆ ಪ್ರತಿಸ್ಪಽಯಾಗದ ರೀತಿಯಲ್ಲಿ ಕಟ್ಟಿ ಬೆಳೆಸಿದ್ದಾರೆ. ಜನರ ಜತೆಗೆ ಒಡನಾಟ ಇಟ್ಟುಕೊಳ್ಳುವ ಜತೆಗೆ ಪ್ರತಿಯೊಬ್ಬರಲ್ಲಿ ನಾಯಕತ್ವವನ್ನು ಸೃಷ್ಟಿಸುವ ಬದುಕು ಕಟ್ಟಿಕೊಂಡಿದ್ದರು. ಸ್ನೇಹ ಹಾಗೂ ಭರವಸೆಯನ್ನು ಉದ್ಯೋಗಿಗೆ ನೀಡುವ ಕಾರ್ಯವನ್ನು ಮಾಡುತ್ತಿದ್ದ ಅವರು ಕಾಯವಾಗಿಲ್ಲದೆ ಕಾಯಕದಲ್ಲಿ ಉಳಿದಿದ್ದಾರೆ. ಆ ಕಾಯಕವನ್ನು ಮುಂದುವರಿಸಿ ಬೆಳೆಸುವ ಜವಾಬ್ದಾರಿ ನಮಗೆಲ್ಲರಿಗಿದೆ ಎಂದು ನಿವೃತ್ತ ಉಪನ್ಯಾಸಕ ವಿಶ್ವೇಶ್ವರ ಭಟ್ ಉಂಡೆಮನೆ ಹೇಳಿದರು.


ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ಎಲ್. ಎನ್. ಕೂಡೂರು ಅವರಿಗೆ ನಡೆದ ಸ್ಮೃತಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಂದ ಎಲ್.ಎನ್. ಕೂಡೂರು ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಮಾಜಿ ಶಾಸಕರಾದ ರುಕ್ಮಯ್ಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ಗೋಪಾಲಕೃಷ್ಣ ಹೇರಳೆ, ಭವಾನಿ ರೈ ಕೊಲ್ಯ, ಅರುಣ್ ವಿಟ್ಲ, ವಿಠಲ ಎಜುಕೇಶನ್ ಸೊಸೈಟಿ ಆಡಳಿತ ಮಂಡಳಿಯ ಅಧ್ಯಕ್ಷ ಮುಗುಳಿ ತಿರುಮಲೇಶ್ವರ ಭಟ್, ಉಪಾಧ್ಯಕ್ಷ ಅಲಾನ್ಸ್ ಸಿಲ್ವೆಸ್ಟರ್ ಮಸ್ಕರೇನ್ಹಸ್, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಎಂ., ಕೋಶಾಈಜಿಕಾರಿ ಬಾಬು ಕೆ., ಸದಸ್ಯರಾದ ನಿತ್ಯಾನಂದ ನಾಯಕ್ ಎಂ., ಕೆ. ಪದ್ಮಯ್ಯ ಗೌಡ, ಸದಾಶಿವ ಬಿ., ಆಡಳಿತಾಽಕಾರಿ ಪ್ರಶಾಂತ್ ಕೆ. ಎಸ್. ವಿಠಲ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಆದರ್ಶ ಎ.ಎಸ್., ನಿವೃತ್ತ ಪ್ರಾಶುಂಪಾಲ ರಾಧಾಕೃಷ್ಣ ಭಟ್, ಪ್ರೌಢ ಶಾಲಾ ವಿಭಾಗ ಹಿರಿಯ ಶಿಕ್ಷಕ ಶಂಕರನಾರಾಯಣ ಪ್ರಸಾದ್, ಸುಪ್ರಜಿತ್ ಐಟಿಐ ಪ್ರಾಂಶುಪಾಲ ರಮೇಶ್ ರೈ, ವಿಟ್ಠಲ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಆಡಳಿತ ಮಂಡಳಿ ಉಪಾಧ್ಯಕ್ಷ ಡಿ. ಶ್ರೀಧರ ಶೆಟ್ಟಿ, ಕಾರ್ಯದರ್ಶಿ ಮೋಹನ ಎ., ಕೋಶಾಽಕಾರಿ ಡಿ.ಪ್ರಭಾಕರ ಶೆಟ್ಟಿ, ಜತೆ ಕಾರ್ಯದರ್ಶಿ ಶ್ರೀಪ್ರಕಾಶ್ ಕುಕ್ಕಿಲ, ನಿರ್ದೇಶಕರಾದ ವಿ. ಮೋನಪ್ಪ ಶೆಟ್ಟಿ, ಗೋಕುಲ್ ಶೇಟ್, ಹಸನ್ ವಿಟ್ಲ, ವಿಜಯ ಪಾಯಿಸ್, ಸಂತೋಷ್ ಶೆಟ್ಟಿ ಪೆಲ್ತಡ್ಕ, ಆಡಳಿತಾಽಕಾರಿ ರಾಧಾಕೃಷ್ಣ ಎ., ಪ್ರಾಂಶುಪಾಲ ಜಯರಾಮ ರೈ ಡಿ., ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಗನ್ನಾಥ್ ಸಾಲಿಯಾನ್, ಮುಖ್ಯ ಕಾರ್ಯ ನಿರ್ವಹಣಾಽಕಾರಿ ಕೃಷ್ಣ ಮುರಳಿ ಶ್ಯಾಮ್ ಕೆ., ಮೃತರ ತಾಯಿ ಕಮಲಮ್ಮ ಕೂಡೂರು, ಪತ್ನಿ ಸಿರಿ ಎಲ್. ಎನ್. ಕೂಡೂರು, ಪುತ್ರರಾದ ಅನಿರುದ್ಧ ಕೂಡೂರು, ಅಭಿಜಿತ್ ಕೂಡೂರು, ಸಹೋದರರಾದ ರಾಮಚಂದ್ರ ಭಟ್ ಕೂಡೂರು, ಡಾ. ಸುರೇಶ್ ಕೂಡೂರು, ಕೂಡೂರು ಕುಟುಂಬಸ್ಥರು ಉಪಸ್ಥಿತರಿದ್ದರು. ವಿಠಲ ಪದವಿಪೂರ್ವ ಕಾಲೇಜು ಸಹಶಿಕ್ಷಕ ಶ್ರೀಹರಿ ಶರ್ಮ ಕಾರ್ಯಕ್ರಮ ನಿರೂಪಿಸಿದರು.