ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಉದಾತ್ತ ಕಲಾ ಅಕಾಡೆಮಿಯು ಶ್ರೀ ಕುಮಾರೇಶ್ವರ ಕಲ್ಚರಲ್ ಸೊಸೈಟಿ ಸಹಯೋಗದಲ್ಲಿ ಜೂ. 8ರಂದು ಸಂಜೆ 5 ಗಂಟೆಗೆ ಇಲ್ಲಿನ ಆಲೂರು ವೆಂಕಟರಾವ್ ಸಾಂಸತಿಕ ಭವನದಲ್ಲಿ ಸ್ವರ ಸಾಮ್ರಾಟ್ ಪಂ.ಬಸವರಾಜ ರಾಜಗುರು ಸ್ಮತಿ ಸಂಗೀತೋತ್ಸವ ಏರ್ಪಡಿಸಿದೆ.
ಗಾಯಕ ಪಂ. ಪರಮೇಶ್ವರ ಹೆಗಡೆ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ರಾಜಗುರು ಟ್ರಸ್ಟ್ ಸದಸ್ಯ ನಿಜಗುಣ ರಾಜಗುರು, ಭಾರತಿದೇವಿ ರಾಜಗುರು ಹಾಗೂ ಡಾ. ಶಶಿಧರ ನರೇಂದ್ರ ಅತಿಥಿಗಳಾಗಿ ಪಾಲ್ಗೊಳ್ಳುವರು. ಸೊಸೈಟಿ ಅಧ್ಯ ಮಲ್ಲಿಕಾರ್ಜುನ ಚಿಕ್ಕಮಠ ಉಪಸ್ಥಿತರಿರುವರು. ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯ ಚಂದ್ರಕಾಂತ ಬೆಲ್ಲದ ಅಧ್ಯತೆ ವಹಿಸುವರು.
ನಂತರ ಪಂ.ಪರಮೇಶ್ವರ ಹೆಗಡೆ ಹಾಗೂ ವಿವೇಕ ಹೆಗಡೆ ಗಾಯನ ಮತ್ತು ಯುವ ಕಲಾವಿದೆ ಸೃಷ್ಟಿ ಸುರೇಶ ಸಿತಾರ ವಾದನ ಪ್ರಸ್ತುತ ಪಡಿಸುವರು. ತಬಲಾದಲ್ಲಿ ಗೋಪಾಲಕೃಷ್ಣ ಹೆಗಡೆ ಹಾಗೂ ಅಲ್ಲಮಪ್ರಭು ಕಡಕೋಳ, ಹಾರ್ಮೊನಿಯಂದಲ್ಲಿ ಸತೀಶ ಭಟ್ ಹೆಗ್ಗಾರ ಸಾಥ್ ನೀಡಲಿದ್ದಾರೆ ಎಂದು ಸಂಯೋಜಕ ಪ್ರಕಾಶ ಬಾಳಿಕಾಯಿ ಹಾಗೂ ಅಕಾಡೆಮಿ ಗೌ.ನಿರ್ದೇಶಕ ಡಾ. ಶಾಂತಾರಾಮ ಹೆಗಡೆ ತಿಳಿಸಿದ್ದಾರೆ.