ಸೋಮವಾರಪೇಟೆ : ಸಂಘದ ಸದಸ್ಯರ ಮಕ್ಕಳಿಗೆ ಉಚಿತ ನೋಟ್‌ಬುಕ್‌ಗಳನ್ನು ವಿತರಿಸಲು ತಾಲೂಕು ಮೊಗೇರ ಸೇವಾ ಸಮಿತಿ ಸಭೆ ನಿರ್ಧರಿಸಿದೆ.
ಸಂಘದ ತಾಲೂಕು ಅಧ್ಯಕ್ಷ ವಸಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಮುಖರ ಸಭೆ ಈ ನಿರ್ಧಾರ ಕೈಗೊಂಡಿದೆ. 23ರಂದು ನೋಟ್ ಬುಕ್ ವಿತರಿಸುವಂತೆ ಪ್ರಮುಖರು ಸೂಚಿಸಿದ್ದಕ್ಕೆ ಸಭೆ ಸಮ್ಮತಿಸಿದೆ. ಸಂಘದ ಮಾಜಿ ಅಧ್ಯಕ್ಷರೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದು, ಅವರ ಚಿಕಿತ್ಸೆಗೆ 10 ಸಾವಿರ ರೂ.ಗಳನ್ನು ಸಂಘದ ವತಿಯಿಂದ ಹಸ್ತಾಂತರಿಸಲಾಯಿತು.
ಒತ್ತಾಯ: ಅಸ್ಸಾಂ ಮೂಲದ ವ್ಯಕ್ತಿಯೊಬ್ಬರು ಇತ್ತೀಚೆಗೆ ಕಾರೇಕೊಪ್ಪ ಜಂಕ್ಷನ್ ಬಳಿ ಬೆಳಗಿನ ವೇಳೆಯಲ್ಲೇ ಕಾರ್ಮಿಕ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಪೊಲೀಸರು ಇನ್ನೂ ಕ್ರಮ ವಹಿಸಿಲ್ಲ. ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಪೊಲೀಸರು ಕ್ರಮ ವಹಿಸಬೇಕು ಎಂದು ಅಧ್ಯಕ್ಷ ವಸಂತ್ ಕುಮಾರ್ ಒತ್ತಾಯಿಸಿದರು.ಕಡಿಮೆ ಸಂಬಳಕ್ಕೆ ಹೊರರಾಜ್ಯದ ಕೂಲಿ ಕಾರ್ಮಿಕರನ್ನು ಕರೆತರುವ ಎಸ್ಟೇಟ್ ಮಾಲೀಕರು, ಲೈನ್‌ಮನೆಯಲ್ಲಿ ಅವರನ್ನು ಇಟ್ಟುಕೊಂಡಿರುತ್ತಾರೆ. ಅವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಪರಿಪಾಠವಿಲ್ಲ.ಹಲ್ಲೆ, ಕೊಲೆ, ಮಾನಭಂಗದಂತಹ ಕೃತ್ಯಗಳು ನಡೆದಾಗ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಿ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು. ಸಂಘದ ಕಾರ್ಯದರ್ಶಿ ಕೆ.ಕೆ.ಗಣೇಶ್, ಸಲಹೆಗಾರ ಕೆ.ವಿ.ನಂದ ಇದ್ದರು.