filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43; 
ಜಿಲ್ಲೆ

ಸುಗಮ ಸಂಚಾರಕ್ಕೆ ರಸ್ತೆ ನಿರ್ಮಾಣ

ಎಂ.ಎಸ್​.ಹಿರೇಮಠ ಬೆಳಗಾವಿ

ಸವದತ್ತಿ: ಸುಗಮ ಸಂಚಾರ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಪಟ್ಟಣದ ಸುಂದರೀಕರಣಕ್ಕಾಗಿ ಸಾರ್ವಜನಿಕರು ಸಹಕರಿಸಬೇಕೆಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಇಲ್ಲಿನ ಬಸ್​ ನಿಲ್ದಾಣದ ಹತ್ತಿರ ಭಾನುವಾರ ಲೋಕೋಪಯೋಗಿ ಇಲಾಖೆಯಿಂದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಸವದತ್ತಿ ಪಟ್ಟಣವನ್ನು ಅಲಂಕಾರಿಕ ವಿದ್ಯುತ್​ ದೀಪಗಳ ಮೂಲಕ ಸುಂದರ ನಗರವನ್ನಾಗಿಸುವ ಯೋಜನೆ ಇದೆ. ಲೋಕೋಪಯೋಗಿ ಇಲಾಖೆಯಡಿ 16 ಕೋಟಿ ರೂ. ವೆಚ್ಚದಲ್ಲಿ ಎಪಿಎಂಸಿಯಿಂದ ಕೊಪ್ಪದ ಮಾರುತಿ ದೇವಸ್ಥಾನದವರೆಗೆ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು. ಗುಣಮಟ್ಟದ ರಸ್ತೆ, ಚರಂಡಿ ಕಾಮಗಾರಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಸಚಿವ ಸತೀಶ್​ ಜಾರಕಿಹೊಳಿ ಹಾಗೂ ಶಾಸಕ ವಿಶ್ವಾಸ ವೈದ್ಯ ಭಾವಚಿತ್ರದ ಪುಸ್ತಕವನ್ನು ಶಾಸಕ ವಿಶ್ವಾಸ ವೆದ್ಯ ಬಿಡುಗಡೆಗೊಳಿಸಿದರು.

ಶಿವಾನಂದ ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಪುರದಗುಡಿ, ಶಿವಾನಂದ ಹೂಗಾರ, ಮಂಜುನಾಥ ಪಾಚಂಗಿ, ಬಿ.ಎನ್​. ಪ್ರಭುನವರ, ವಕೀಲ ಬಿ.ಎಂ.ಯಲಿಗಾರ, ಎ್​.ವೈ.ಗಾಜಿ, ಎಂ.ಎನ್​. ಮುತ್ತಿನ, ಅಮೀರ್​ ಗೋರಿನಾಯಕ, ಮಂಜುನಾಥ ಪಾಚಂಗಿ, ದಿನಾವರ ಸನದಿ, ಬಸವರಾಜ ಅರಮನಿ, ಬಿ.ಜಿ. ನಾಶಿಪುಡಿ, ಹುಸೇನ ಗೊರವಣಕೊಳ್ಳ, ಮಲ್ಲಿಕಾರ್ಜುನ ಬೇವೂರ, ಅಬ್ದುಲ್​ ಲತ್​ೀ ಸವದತ್ತಿ, ಕ್ರುಸಾಬ್​ ದೊಡಮನಿ, ಆಸ್​ೀ ಬಾಗೋಜಿಕೊಪ್ಪ ಇದ್ದರು.