ಬಾದಾಮಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯನ್ನು ಹಿರಿಯ ದಿವಾಣಿ ನ್ಯಾಯಾಧೀಶ ಚನ್ನಕೇಶವರಡ್ಡಿ ಉದ್ಘಾಟಿಸಿದರು. ಪ್ರಧಾನ ದಿವಾಣಿ ನ್ಯಾಯಾಧೀಶ ಸಂಜಯಕುಮಾರ ಪಾಚ್ಚಾಪುರೆ, ಆಸ್ಪತ್ರೆ ದಂತ ತಜ್ಞ ಡಾ. ಜಯಂತ್, ತಾಲೂಕು ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ. ಕೆ.ಟಿ. ಗಾಜಿ ಇತರರಿದ್ದರು. 
ಜಿಲ್ಲೆ

ತಂಬಾಕು ಸೇವನೆಯಿಂದ ಜೀವನ ಹಾಳು

ಬಾದಾಮಿ: ತಂಬಾಕು ಸೇವನೆಯಿಂದ ಮನುಷ್ಯನ ಜೀವನ ಹಾಳಾಗುತ್ತದೆಯಲ್ಲದೆ, ಅನೇಕ ರೋಗಗಳು, ಕ್ಯಾನ್ಸರ್ ಆಗುವ ಸಂಭವವಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ವಿ. ಚನ್ನಕೇಶವರೆಡ್ಡಿ ಹೇಳಿದರು.

ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನ ದಿವಾಣಿ ನ್ಯಾಯಾಧೀಶ ಸಂಜಯಕುಮಾರ ಪಾಚ್ಚಾಪುರೆ, ಆಸ್ಪತ್ರೆ ದಂತ ತಜ್ಞ ಡಾ. ಜಯಂತ್ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಆರೋಗ್ಯ ನಿರೀಕ್ಷಾಣಾಧಿಕಾರಿ ಪಿ.ಎಚ್. ಮಹಾಲಿಂಗಪುರ ಉಪನ್ಯಾಸ ನೀಡಿದರು.

ತಾಲೂಕು ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಡಾ. ಕೆ.ಟಿ. ಗಾಜಿ, ಆಶಾ ಮೆಂಟರ್ ಲಕ್ಷ್ಮೀ ಡಬಗಲ್, ಬಿ.ಎಂ. ಹೊರಕೇರಿ ಪ್ಯಾರಾ ಮೆಡಿಕಲ್ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತರು, ಸಿಬ್ಬಂದಿ ಇದ್ದರು.

ಕ್ಷಯ ರೋಗದ ಮೇಲ್ವಿಚಾರಕ ಆರ್.ಬಿ. ಅಂಬಿಗೇರ ನಿರೂಪಿಸಿದರು. ಮಲೇರಿಯಾ ಮೇಲ್ವಿಚಾರಕ ಮಂಜು ಅಂಗಡಿ ವಂದಿಸಿದರು.