ಗದಗ: ಜಿಲ್ಲಾ ಸಮೀಕ್ಷಣಾಧಿಕಾರಿಗಳು ಹಾಗೂ ಎನ್.ಟಿ.ಸಿ.ಪಿ. ಕಾರ್ಯಕ್ರಮಾಧಿಕಾರಿ ಡಾ.ವೆಂಕಟೇಶ್ ರಾಥೊಡ್ ಇವರ ನೆತೃತ್ವದಲ್ಲಿ ಗುರುವಾರದಂದು ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳ ಹಾಗೂ ತಾಲೂಕಾ ತಂಬಾಕು ನಿಯಂತ್ರಣ ತನಿಖಾ ದಳ ಗದಗ , ಗದಗ ನಗರದ ಕಲಾಮಂದಿರ ರಸ್ತೆ ಹಾಗೂ ಹಳೆ ಬಸ್ಸ ನಿಲ್ದಾಣ ಗದಗ ಹತ್ತಿರ ಕೋಟ್ಪಾ ದಾಳಿ ಹಮ್ಮಿಕೊಳ್ಳಲಾಯಿತು.
ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ಕುರಿತು ಸಾರ್ವಜನಿಕರಲ್ಲಿ ಹಾಗೂ ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಲಾಯಿತು, ಬಸ್ಸ ನಿಲ್ದಾಣ ಹೊಟೆಲ್ ಬಾರ್ & ರೆಸ್ಟರೋರೆಂಟ್ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವದು ಅ ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ. ಕೆಲವು ಪಾನ್ ಶಾಪ್ ಅಂಗಡಿಗಳ ಹಿಂದೆ ಧೂಮಪಾನಕ್ಕೆ ಅನಧಿಕೃತವಾಗಿ ಅವಕಾಶ ಮಾಡಲಾಗುತ್ತಿದ್ದು ಅಂತಹ ಅಡ್ಡಾಗಳನ್ನು ತೆರವು ಮಾಡಲು ಎಚ್ಚರಿಕೆ ನೀಡಲಾಯಿತು, ಶಾಲಾಕಾಲೇಜು ಆವರಣದಿಂದ 100 ಗಜದ ವರೆಗೆ ತಂಬಾಕು ಬಳಕೆ ಮಾರಾಟ ನಿಷೇಧಿಸಲಾಗಿದ್ದು ಉಲ್ಲಂಘನೆಯಾದಲ್ಲಿ ಅಂತವರ ಮೇಲೆ ಕ್ರಮ ವಹಿಸಿ ಆ ಅಂಗಡಿಗಳ ಲೈಸೆನ್ಸ ರದ್ದು ಮಾಡಲಾಗುವದು .ತಂಬಾಕು ಕುರಿತ ಜಾಹಿರಾತು ನಿಷೇದಿಸುವದು, 18 ವರ್ಷದೋಳಗಿನವರಿಗೆ ತಂಬಾಕು ನಿಷೇಧಿಸುವದು ,ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಶೇ 85% ರಷ್ಟು ಅರೋಗ್ಯ ಎಚ್ಚರಿಕೆ ಚಿನ್ಹೆ ಕಡ್ಡಾಯ ಈ ಕುರಿತು ಮಾಹಿತಿ ಹಾಗೂ ಜಾಗೃತಿ ಮೂಡಿಸಿ ಉಲ್ಲಂಘನೆ ಮಾಡಿದವರ ವಿರುದ್ಧ ಎಚ್ಚರಿಕೆ ನೀಡಿ ಒಟ್ಟು 10 ಪ್ರಕರಣ ದಾಖಲಿಸಿ ರೂ. 1800/- ದಂಡ ಸಂಗ್ರಹಿಸಲಾಯಿತು.
ದಾಳಿಗಳಲ್ಲಿ ಗೋಪಾಲ ಸುರಪುರ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರರು, ಪೊಲೀಸ್ ಇಲಾಖೆಯ ಆರ್.ಆರ್.ಮುಂಡೆವಾಡಗಿ .ಪಿ.ಎಸ್.ಐ. ವಿ.ಎಸ್.ಬಿಕ್ಷಾವತಿಮಠ, ವೈ.ಎನ್.ಕಡೆಮನಿ. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಹಾಗೂ ಖಾದರ್ ಸಾಬ ನಧಾಫ್ ರೋಹನ್ ಎಸ್. ಉಪಸ್ಥಿತರಿದ್ದರು.